ತುಮಕೂರು: 15 ವರ್ಷದ ಬಾಲಕಿ ಮೇಕೆ ಅತ್ಯಾಚಾರವೆಸಗಿ ಮಗುವಿಗೆ ಜನ್ಮನೀಡಲು ಕಾರಣನಾದ ಆರೋಪಿಯನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಿನಯ್ (21) ಎಂದು ಗುರುತಿಸಲಾಗಿದೆ. ಬಾಲಕಿ ಹಾಗೂ ಯುವಕ ಅಕ್ಕಪಕ್ಕದ ನಿವಾಸಿಗಳು. ಮದುವೆಯ ಆಮಿಷವೊಡ್ಡಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ವಿನಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಕುಣಿಗಲ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು. ಇತ್ತ ಮಗಳ ಆರೋಗ್ಯ ಹದಗೆಟ್ಟಿತ್ತು. ಇದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಬಾಲಕಿ 8 ತಿಂಗಳ ಗರ್ಭಿಣಿ ಎಂಬುದು ತಿಳಿದು ತಾಯಿ ಶಾಕ್ ಆಗಿದ್ದಾರೆ. ಬೆಂಗಳೂರು ಆಸ್ಪತ್ರೆಗೆ ಬಾಲಕಿಯನ್ನು ಶಿಫ್ಟ್ ಮಾಡಲಾಗಿತ್ತು.. ಬಾಲಕಿ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಅತ್ತ ಪೋಕ್ಸೋ ಕೇಸ್ ಅಡಿ ಆರೋಪಿಯನ್ನು ಬಂಧಿಸಲಾಗಿದೆ.