BREAKING: ಪರಪ್ಪನ ಅಗ್ರಹಾರ ಜೈಲಲ್ಲಿ ರೌಡಿಶೀಟರ್ ಬರ್ತಡೇ ಸೆಲೆಬ್ರೇಷನ್: ಇಬ್ಬರು ಅಧಿಕಾರಿಗಳು ಅಮಾನತು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಹುಟ್ಟುಹಬ್ಬ ಆಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.

ಕಾರಾಗೃಹ ಇಲಾಖೆ ಡಿಐಜಿ ದಿವ್ಯಶ್ರೀ ಕಾರಾಗೃಹ ಇಲಾಖೆಯ ಎಡಿಜಿಪಿ ದಯಾನಂದ ಅವರಿಗೆ ಲ್ಲಿಸಿದ್ದರು. ವರದಿ ಆಧರಿಸಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಸೆ. 5 ರಂದು ಆರನೇ ಬ್ಯಾರಕ್ ನ 7ನೇ ಕೊಠಡಿಯಲ್ಲಿ ಬರ್ತಡೇ ಸೆಲೆಬ್ರೇಷನ್ ನಡೆದಿತ್ತು. ಘಟನೆ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬರ್ತಡೇ ಸೆಲೆಬ್ರೇಷನ್ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸೆಂಟ್ರಲ್ ಜೈಲ್ ನಲ್ಲಿ ಮೊಬೈಲ್ ಸಿಕ್ಕಿದ್ದು ಹೇಗೆ? ಸರಬರಾಜು ಮಾಡಿದ್ದು ಯಾರು? ಯಾವಾಗಿನಿಂದ ಮೊಬೈಲ್ ಬಳಕೆ ಬಗ್ಗೆ ತನಿಖೆ ನಡೆಸಿ ಡಿಐಜಿ ವರದಿ ಸಲ್ಲಿಸಿದ್ದರು. ತನಿಖೆಯಲ್ಲಿ 7 ಜೈಲು ಅಧಿಕಾರಿಗಳು, ಸಿಬ್ಬಂದಿಯ ಕರ್ತವ್ಯ ಲೋಪ ಸಾಬೀತಾಗಿದೆ.

ಪರಪ್ಪನ ಅಗ್ರಹಾರ ಜೈಲರ್, ವಾರ್ಡನ್, ಸಹಾಯಕ ಜೈಲರ್ ಸೇರಿದಂತೆ 7 ಸಿಬ್ಬಂದಿ ಕರ್ತವ್ಯ ಲೋಪದ ಬಗ್ಗೆ ಡಿಐಜಿ ದಿವ್ಯಶ್ರೀ ಅವರು ವರದಿ ನೀಡಿದ್ದರು. ಇಬ್ಬರ ಅಮಾನತಿಗೆ ಶಿಫಾರಸು ಮಾಡಿದ್ದರು. ಸಹಾಯಕ ಅಧೀಕ್ಷಕ, ಇಬ್ಬರು ಜೈಲರ್, ಇಬ್ಬರು ಸಹಾಯಕ ಜೈಲರ್ ಸೇರಿದಂತೆ ಐವರ ವಿರುದ್ಧ ಶಿಸ್ತು ಕ್ರಮಕ್ಕೆ ದಿವ್ಯಶ್ರೀ ಶಿಫಾರಸು ಮಾಡಿದ್ದರು. ಡಿಐಜಿ ವರದಿ ಆಧರಿಸಿ ಪ್ರಾಥಮಿಕವಾಗಿ ಇಬ್ಬರು ಅಧಿಕಾರಿಗಳನ್ನು ಎಡಿಜಿಪಿ ದಯಾನಂದ್ ಅಮಾನತು ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read