ಬೆಂಗಳೂರು : ಬಿಗ್ ಬಾಸ್ ಮನೆಗೆ ಬೀಗ ಬಿದ್ದಿದ್ದು, ಸ್ಪರ್ಧಿಗಳನ್ನು ಖಾಸಗಿ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ. ಬಿಗ್ ಬಾಸ್’ ಮನೆಗೆ ಬೀಗ ಬಿದ್ದ ಬೆನ್ನಲ್ಲೇ ಸ್ಪರ್ಧಿ ರಕ್ಷಿತಾ ಡೈಲಾಗ್ ಭಾರಿ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಮನೆಗೆ ಹೋದ ಕೂಡಲೇ ಸ್ಪರ್ಧಿಗಳು ರಕ್ಷಿತಾ ಅವರನ್ನು ಎಲಿಮಿನೇಟ್ ಮಾಡಿದ್ದರು. ನಂತರ ರಕ್ಷಿತಾ ಅವರನ್ನು ಸೀಕ್ರೆಟ್ ರೂಮ್ ನಲ್ಲಿ ಇಡಲಾಗಿತ್ತು. ಕಳೆದ ಶನಿವಾರ ಸುದೀಪ್ ಅವರು ರಕ್ಷಿತಾ ಅವರನ್ನು ಮತ್ತೆ ಮನೆ ಒಳಗಡೆ ಕಳುಹಿಸಿದ್ದರು. ಈ ವೇಳೆ ಸುದೀಪ್ ರಕ್ಷಿತಾ ಅವರಿಗೆ ಒಂದು ಪ್ರಶ್ನೆ ಕೇಳಿದ್ದರು. ನೀವು ಮೊದಲು ಮನೆಗೆ ಹೋದ ಮೇಲೆ ಯಾರನ್ನ ಎಲಿಮಿನೇಟ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು.
ಅದಕ್ಕೆ ರಕ್ಷಿತಾ ನಾನು ಎಲ್ಲರನ್ನೂ ಹೊರಗೆ ಹಾಕುತ್ತೇನೆ ಎಂದು ಹೇಳಿದ್ದರು. ಈ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಕ್ಷಿತಾ ಪ್ರಾರ್ಥನೆಗೆ ದೇವರು ತತಾಸ್ಥು ಎಂದಿದ್ದಾನೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಸುದೀಪ್ ರವರು : – ರಕ್ಷಿತಾ ರವರೇ ಈ ಸಲ ಒಳಗೆ ಹೋದರೆ ಯಾರನ್ನು ಹೊರಗೆ ಹಾಕಲು ಬಯಸುತ್ತೀರಿ?
ರಕ್ಷಿತಾ ಶೆಟ್ಟಿ : -ನಾನು ಎಲ್ಲರನ್ನೂ ಹೊರಗೆ ಹಾಕುತ್ತೇನೆ
ದೇವರು- ತಥಾಸ್ತು!
A post shared by ಕನ್ನಡ ಸ್ಪೆಷಲ್ ಮಿಮ್ಸ್ 💛❤️ (@kannada.special.memes)