ಬೆಂಗಳೂರು: ಜಲ ಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯನಿರ್ವಹಣೆ ಆರೋಪದ ಮೇಲೆ ಜನಪ್ರಿಯ ‘ಬಿಗ್ ಬಾಸ್’ ರಿಯಾಲಿಟಿ ಶೋ ನಡೆಯುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಮಂಗಳವಾರ ಸಂಜೆ ಜಿಲ್ಲಾಡಳಿತ ಬೀಗ ಹಾಕಿದೆ.
ಬೇಗ ಹಾಕಿದ ಪರಿಣಾಮ ‘ಬಿಗ್ ಬಾಸ್’ ಎರಡನೇ ವಾರದಲ್ಲಿ ಶೂಟಿಂಗ್ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ‘ಬಿಗ್ ಬಾಸ್’ ತಂಡ ಬುಧವಾರ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದ್ದು, ಶೀಘ್ರ ವಿಚಾರಣೆಗೆ ಮನವಿ ಮಾಡಲಿದೆ. ಒಂದು ವೇಳೆ ವಿಚಾರಣೆ ನಡೆದು ಶೀಘ್ರ ತಡೆಯಾಜ್ಞೆ ದೊರೆತರೆ ಶೋ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ‘ಬಿಗ್ ಬಾಸ್’ ಸೀಸನ್ 12 ಕೇವಲ ಎರಡೇ ವಾರಕ್ಕೆ ಮುಕ್ತಾಯವಾಗಲಿದೆ.