BIG NEWS: ವನಭೋಜನಕ್ಕೆ ತೆರಳಿದ್ದಾಗ ದುರಂತ: ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಬಿದ್ದು ಇಬ್ಬರು ಸಹೋದರರು ಸಾವು

ವಿಜಯನಗರ: ಕಾಲು ಜಾರಿ ತುಂಗಭದ್ರಾ ಹಿನ್ನೀರಿಗೆ ಬಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ.

ಹಂಪಿನಕಟ್ಟೆ ಗ್ರಾಮದ ರಾಜಾಭಕ್ಷಿ (30) ಹಾಗೂ ಸಹೋದರ ಗ್ರಾಮ ಲೆಕ್ಕಿಗ ಬಾರಿ ಇಮಾಂ (26) ಮೃತರು. ಮನೆಯಲ್ಲಿ ಗ್ಯಾರ್ವಿ ಹಬ್ಬ ಆಚರಣೆ ಬಳಿಕ ಕುಟುಂಬ ಸದಸ್ಯರ ಜೊತೆ ತುಂಗಭದ್ರಾ ಜಲಾಶಯದ ಹಿನ್ನೀರ ಪ್ರದೇಶಕ್ಕೆ ವನಭೋಜನಕ್ಕೆ ಹೋಗಿದ್ದರು. ಈ ವೇಳೆ ನದಿಗೆ ಇಳಿದಿದ್ದಾರೆ. ಓರ್ವ ಕಾಲು ಜಾರಿ ನದಿಗೆ ಬೀಳುತ್ತಿದ್ದಂತೆ ಆತನನ್ನು ರಕ್ಷಿಸಲು ಹೋದ ಮತ್ತೋರ್ವ ಸೇರಿ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read