ಬೆಂಗಳೂರು: ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಅನಧಿಕೃತವಾಗಿ ವಾಸವಾಗಿರುವ ಆರೋಪದಲ್ಲಿ 14ಜನರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಬೆಂಗಳೂರಿನ ಶ್ರೀಗಂಧದಕಾವಲ್ ನಲ್ಲಿರುವ ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಕೆಲವರು ಅನಧಿಕೃತವಾಗಿ ವಾಸವಾಗಿದ್ದಾರೆ ಎಂದು ವಿಚಕ್ಷಣಾ ದಳದ ಅಧಿಕಾರಿ ಎಂ.ರಾಜ್ರ್ಶ್ ಜಯಸಿಂಹನ್ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ವಾರ್ಡನ್ ಗಳಾದ ಮಂಜುನಾಥ್, ವಿಜಯ್ ಕುಮಾರ್ ಹಾಗೂ ವಿದ್ಯಾರ್ಥಿಗಳಾದ ಮನೋಹರ್, ಅರುಣ್ ಕುಮಾರ್, ಶ್ರೀಕಾಂತ್, ಗಣೇಶ್, ಜಯರಾಜ್, ರಘು, ಅಂಜನಪ್ಪ, ಸಂದೇಶ್, ಜೀವರರತ್ನಂ, ನರೇಂದ್ರ, ಸಾಗರ್, ಕಾರ್ತಿಕ್ ನಾಯಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.