ಯಾದಗಿರಿ: ದೈಹಿಕ ಸಂಪರ್ಕ ಒಲ್ಲೆ ಎಂದ ಪತ್ನಿಯನ್ನು ಪಾಪಿ ಪತಿಯೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಮಾರಮ್ಮ ಪತಿಯಿಂದ ಕೊಲೆಯಾದ ಮಹಿಳೆ. ಸಂಗಪ್ಪ ಪತ್ನಿಯನ್ನೇ ಕೊಲೆಗೈದ ಪತಿ. ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಈ ಘಟನೆ ನಡೆದಿದೆ. ಪತ್ನಿ ಮಾರಮ್ಮನನ್ನು ಕೊಲೆಗೈದು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಕಳೆದ ಒಂದು ವರ್ಷದಿಂದ ಮಾರಮ್ಮ ತವರಿನಲ್ಲಿದ್ದರು ಎಂದು ತಿಳಿದುಬಂದಿದೆ. ದೈಹಿಕ ಸಂಪರ್ಕ ನಿರಾಕರಿಸಿದ್ದಕ್ಕೆ ರಾಕ್ಷಸ ಪತಿ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.