ಶಿವಮೊಗ್ಗ: ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಅಂಗಡಿ ಮಾಲೀಕನಿಗೆ ಬ್ಲ್ಯಾಕ್ಮೇಲ್ ಮಾಡಿ 36.50 ಲಕ್ಷ ರೂ. ವಸೂಲಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಾಗರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಗರದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ ಯುವತಿ ಮತ್ತು ಆಕೆಯ ಗೆಳೆಯ ಮಾಲೀಕರ ಖಾಸಗಿ ವಿಡಿಯೋ ತಮ್ಮ ಬಳಿ ಇರುವುದಾಗಿ ಹೇಳಿ ಬ್ಲಾಕ್ಮೇಲ್ ಮಾಡಿದ್ದಾರೆ. ಕೇಳಿದ್ದಷ್ಟು ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ.
ಇದರಿಂದ ಹೆದರಿದ ಅಂಗಡಿ ಮಾಲೀಕ ಹಂತ ಹಂತವಾಗಿ 36.50 ಲಕ್ಷ ರೂಪಾಯಿ ನೀಡಿದ್ದರು. ಇಷ್ಟು ಹಣ ಕೊಟ್ಟರೂ ಅವರು ಮತ್ತಷ್ಟು ಹಣಕ್ಕಾಗಿ ಒತ್ತಡ ಹಾಕುತ್ತಿದ್ದರು. ಇದರಿಂದ ಬೇಸತ್ತ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಾಗರ ಠಾಣೆ ಪೊಲೀಸರು ಯುವತಿ ಮತ್ತು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ.