ಮೈಸೂರು: ನವೆಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ನವೆಂಬರ್ ನಲ್ಲಿ ಕ್ರಾಂತಿ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ನವೆಂಬರ್ ನಲ್ಲಿ ಖಂಡಿತ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆ ಎಂದರು.
ಸಿಎಂ ಸಿದ್ದರಾಮಯ್ಯ ನಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಡೆ ಇದೆ. ಡಿ.ಕೆ.ಶಿವಕುಮಾರ್ ನಡೆ ಸಿಎಂ ಸಿದ್ದರಾಮಯ್ಯ ಕಡೆ ಇದೆ. ಆದರೆ ಶಾಸಕರ ನಡೆ ಬೇರೆ ಕಡೆ ಇದೆ. ಹಾಗಾಗಿ ಅಲ್ಲೋಲಕಲ್ಲೋಲವಾಗಲಿದೆ ಎಂದರು.
ರಾಜಕೀಯ ಅಲ್ಲೋಲಕಲ್ಲೋಲವಾದಾಗ ಬಿಜೆಪಿ ನಡೆ ವಿಚಾರವಾಗಿ ಬಿಜೆಪಿ ಸಮರ್ಥ ವಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ರಾಜಕೀಯ ಅವಕಾಶ ಬಂದಾಗ ನೋಡೋಣ ಎಂದು ಹೇಳಿದರು.