ಗಮನಿಸಿ: ರೈಲು ಮಾರ್ಗ ಪರೀಶೀಲನೆ ಹಿನ್ನೆಲೆ ಬದಲಿ ಮಾರ್ಗದಲ್ಲಿ ಸಾರ್ವಜನಿಕರು, ವಾಹನಗಳ ಸಂಚಾರಕ್ಕೆ ಆದೇಶ

ಶಿವಮೊಗ್ಗ: ತರೀಕೆರೆ – ಮೊಸರಳ್ಳಿ ನಡುವೆ ಬರುವ ಎಲ್‌ಸಿ.ನಂ: 24 ಮತ್ತು25 ಗಳನ್ನು ಮುಚ್ಚಲು ಅದಕ್ಕಾಗಿ ಎಲ್‌ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಅ.06 ರಿಂದ 08 ರವರೆಗೆ ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವAತೆ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶ ನೀಡಿರುತ್ತಾರೆ.

ಎಲ್‌ಸಿ 24- ಕಾಳಿಂಗಹಳ್ಳಿ ರಸ್ತೆ ರೈಲು ನಿಲ್ದಾಣ ಅ. 06 ರಂದು ಬೆ. 9.00 ರಿಂದ 07 ರಂದು ಬೆ 10.00ರವರೆಗೆ ಮಾರ್ಗ-1 ಬಾರಂದೂರು ಮೂಲಕ ಎಲ್.ಸಿ. 25 ಹಳ್ಳಿಕೆರೆ ಮುಖಾಂತರ ಮೊಸರಳ್ಳಿಗೆ ಹೋಗುವುದು ಹಾಗೂ ಮಾರ್ಗ 2 ಅಪ್ಪಾಜಿ ಬಡಾವಣೆಯಿಂದ ಕಾಳಿಂಗನಹಳ್ಳಿ ರಸ್ತೆ, ಭದ್ರಾವತಿಯಿಂದ ಮೊಸರಳ್ಳಿಗೆ ಹೋಗುವ ವಾಹನಗಳು ಶಿವನಿ ಕ್ರಾಸ್ ಮುಖಾಂತರ ಅಂತರಗಂಗೆಯಿಂದ ಮೊಸರಳ್ಳಿಗೆ ಹೋಗುವುದು.

ಎಲ್.ಸಿ.25- ಕೆಂಚೇನಹಳ್ಳಿ ರಸ್ತೆ ರೈ.ನಿ.-ಅ.07 ಮತ್ತು 08 ರಂದು ಮಾರ್ಗ-1 ಬಾರಂದೂರು ಮೂಲಕ ಎಲ್‌ಸಿ -24 2) ಅಪ್ಪಾಜಿ ಬಡಾವಣೆಯಿಂದ ಕಾಳಿಂಗನಹಳ್ಳಿ ರಸ್ತೆ ಭದ್ರಾವತಿಯಿಂದ ಮೊಸರಳ್ಳಿಗೆ ಹೋಗುವ ವಾಹನಗಳು ಶಿವನಿ ಕ್ರಾಸ್ ಮುಖಾಂತರ ಅಂತರಗಂಗೆಯಿಂದ ಮೊಸರಳ್ಳಿಗೆ ಹೋಗುವುದು.

ಈ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read