ನೆಲಮಂಗಲ: ಈರುಳ್ಳಿ ತಿಂಬಿದ್ದ ಲಾರಿಯಲ್ಲಿ ಬೆಂಕಿ ಕಾನಿಸಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ಬೂದಿಹಾಳ್ ಗೇಟ್ ಬಳಿ ನಡೆದಿದೆ.
ಈರುಳ್ಳಿ ತುಂಬಿದ್ದ ಲಾರಿ ಚಿತ್ರದುರ್ಗದಿಂದ ನೆಲಮಂಗಲದ ದಾಸನಪುರ ಎಪಿಎಂಸಿಗೆ ಬರುತ್ತಿತ್ತು. ಈ ವೇಳೆ ಮಾರ್ಗಮಧ್ಯೆಯೇ ಲಾರಿ ಇಂಜಿನ್ ನಲ್ಲಿ ಶಾರ್ಟ್ ಸರ್ಕೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಇಡೀ ಲಾರಿಗೆ ಬೆಂಕಿ ಆವರಿಸಿದೆ.
ನೋಡ ನೋಡುತ್ತಿದ್ದಂತೆಯೇ ಈರುಳ್ಳಿ ಲಾರಿ ಬೆಂಕಿಗಾಹುತಿಯಾಗಿದ್ದು, ಧಗಧಗನೆ ಹೊತ್ತಿ ಉರಿದಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈರುಳ್ಳಿ ರೈತ ಬೆಂಕಿ ಅವಘಡದಿಂದ ಕಣ್ಣಿರಿಟ್ಟಿದ್ದಾರೆ.