ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲಾಗಿ ಸಾವನ್ನಪ್ಪಿರುವ ಘೋರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಇಲ್ಲಿನ ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಗ್ರಾಮದ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ದಸರಾ ರಜೆ ಹಿನ್ನೆಲೆಯಲ್ಲಿ ಮಕ್ಕಳು ಕೆರೆಗೆ ಈಜಲು ಹೋಗಿದ್ದರು. ಆದರೆ ಮೂವರಲ್ಲಿ ಓರ್ವ ಬಾಲಕನಿಗೆ ಮಾತ್ರ ಈಜಲು ಬರುತ್ತಿತ್ತು, ಇನ್ನಿಬ್ಬರಿಗೆ ಈಜಲು ಬರುತ್ತಿರಲಿಲ್ಲ. ಈ ವೇಳೆ ಇಬ್ಬರು ಬಾಲಕರನ್ನು ರಕ್ಷಿಸಲು ಹೋಗಿ ಮತ್ತೋರ್ವ ಬಾಲಕ ಕೂಡ ನೀರುಪಾಲಾಗಿದ್ದಾನೆ
ವಿಷ್ಣು (14), ನಿಹಾಲ್ (12) ಹಾಗೂ ಹರ್ಷವರ್ಧನ್ (16) ಮೃತ ಬಾಲಕರು. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.