BREAKING: ಬೆಂಗಳೂರಿನಲ್ಲೊಬ್ಬ ಸೈಕೋಪಾತ್ ಪತಿ: ಬೆಡ್ ರೂಮ್ ನಲ್ಲಿ ಸಿಕ್ರೇಟ್ ಕ್ಯಾಮರಾ; ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಪತ್ನಿಗೆ ಬ್ಲ್ಯಾಕ್ ಮೇಲ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಬ್ಬ ಸೈಕೋಪಾತ್ ಪತಿಯ ಕಿರುಕುಳಕ್ಕೆ ನೊಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಬೆಡ್ ರೂಮ್ ನಲ್ಲಿಯೇ ಸಿಕ್ರೆಟ್ ಕ್ಯಾಮರಾ ಫಿಕ್ಸ್ ಮಾಡಿ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಯನ್ನು ರೆಕಾರ್ಡ್ ಮಾಡಿಕೊಂಡು, ವಿಡಿಯೋ ವನ್ನು ತನ್ನ ಸ್ನೇಹಿತರಿಗೆ ಹಂಚಿ, ಪತ್ನಿಗೆ ತನ್ನ ಸ್ನೇಹಿತರೊಂದಿಗೂ ಲೈಂಗಿಕ ಕ್ರಿಯೆ ನಡೆಸುವಂತೆ ಹಿಂಸಿಸುತ್ತಿದ್ದ.

ತನ್ನ ಸ್ನೇಹಿತರೊಂದಿಗೂ ಮಲಗಬೇಕು, ಇಲ್ಲವಾದಲ್ಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಸೈಕೋಪಾತ್ ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ಪತ್ನಿಯ ವಿರುದ್ಧ ಪುಟ್ಟೇಣಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಮಹಿಳೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೈಯದ್ ಇನಾಮುಲ್ ಜೊತೆ ವಿವಾಹವಾಗಿದ್ದಳು. ಆದರೆ ಅದಾಗಲೇ ಒಂದು ಮದುವೆಯಾಗಿದ್ದ ಇನಾಮುಲ್ ವಿಷಯ ಮುಚ್ಚಿಟ್ಟು ಎರಡನೆ ಮದುವೆಯಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ದುಬೈನಲ್ಲಿರುವ ತನ್ನ ಸ್ನೇಹಿತರಿಗೆ ಹಾಗೂ ಇತರರಿಗೂ ವಿಡಿಯೋ, ಫೋಟೋ ಕಳುಹಿಸಿ ಹಿಂಸಿಸುತ್ತಿದ್ದ. ಅಲ್ಲದೇ ತನಗೆ 19 ಹೆಂಗಸರ ಜೊತೆ ಸಂಬಂಧವಿದೆ ಎಂದು ಹೇಳುತ್ತಿದ್ದನಂತೆ. ಸದ್ಯ ಸೈಕೋ ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read