ಬೆಂಗಳೂರು : ಇಂದು ರಾಜ್ಯಾದ್ಯಂತ ವಿಜಯದಶಮಿ ಹಬ್ಬದ ಸಂಭ್ರಮ. ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘’ನಾಡಿನ ಜನತೆಗೆ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು. ಮನುಕುಲಕ್ಕೆ ಕಂಟಕವಾಗಿದ್ದ ಶತ್ರುಗಳನ್ನು ಸಂಹರಿಸಿ, ನೆಮ್ಮದಿಯ ಅಭಯ ನೀಡಿದ ತಾಯಿ ಚಾಮುಂಡೇಶ್ವರಿಯು ಸದಾಕಾಲ ದ್ವೇಷ, ಹಿಂಸೆ, ದುಃಖಗಳೆಂಬ ಕೆಡಕುಗಳಿಂದ ನಿಮ್ಮೆಲ್ಲರನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ. ಅಧರ್ಮದ ವಿರುದ್ಧದ ಜಯವನ್ನು ಸಂಭ್ರಮಿಸುವ ವಿಜಯದಶಮಿ ಎಲ್ಲರೆದೆಯೊಳಗಿನ ಅವಗುಣಗಳನ್ನು ಮೆಟ್ಟಿ ವಿಕಸನದ ಹಾದಿಯಲ್ಲಿ ನಡೆಸಲಿ ಎಂದು ಆಶಿಸುತ್ತೇನೆ. ಮತ್ತೊಮ್ಮೆ ನಾಡಬಂಧುಗಳಿಗೆ ಹಬ್ಬದ ಶುಭಾಶಯಗಳು’’ ಎಂದಿದ್ದಾರೆ.
ನಾಡಿನ ಜನತೆಗೆ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು.
— Siddaramaiah (@siddaramaiah) October 2, 2025
ಮನುಕುಲಕ್ಕೆ ಕಂಟಕವಾಗಿದ್ದ ಶತ್ರುಗಳನ್ನು ಸಂಹರಿಸಿ, ನೆಮ್ಮದಿಯ ಅಭಯ ನೀಡಿದ ತಾಯಿ ಚಾಮುಂಡೇಶ್ವರಿಯು ಸದಾಕಾಲ ದ್ವೇಷ, ಹಿಂಸೆ, ದುಃಖಗಳೆಂಬ ಕೆಡಕುಗಳಿಂದ ನಿಮ್ಮೆಲ್ಲರನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ.
ಅಧರ್ಮದ ವಿರುದ್ಧದ ಜಯವನ್ನು ಸಂಭ್ರಮಿಸುವ ವಿಜಯದಶಮಿ ಎಲ್ಲರೆದೆಯೊಳಗಿನ… pic.twitter.com/vhYxwyIM7I