ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2025 ಅಂಗವಾಗಿ ಇಂದು ವೈಭವದ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ವಿಜಯದಶಮಿ ದಿನವಾದ ಇಂದು ಮದ್ಯಾಹ್ನ 1 ಗಂಟೆಯಿಂದ 1.18 ರವರೆಗೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಶುಭ ಧನುರ್ ಲಗ್ನದಲ್ಲಿ ನಂದಿದ್ವಜದ ಪೂಜೆ ನಡೆಯಲಿದೆ. ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜದ ಪೂಜೆ ನೆರವೇರಿಸಲಾಗುವುದು.
ಸಂಜೆ 4:42 ರಿಂದ 5.06 ರೊಳಗೆ ಜಂಬೂಸವಾರಿಗೆ ಚಾಲನೆ ನೀಡಲಾಗುವುದು. ಶುಭ ಕುಂಭಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಗಣ್ಯರು ಸೇರಿದಂತೆ ಲಕ್ಷಾಂತರ ಜನ ಜಂಬೂ ಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.