ಬೆಂಗಳೂರು: ಡಿ.ಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆ ಎಂದಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಜೈಲಿಗೆ ಹಾಕಿಸಬೇಕು ಎಂದು ಷಢ್ಯಂತ್ರ ನಡೆಸುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಮೊದಲಿನಿಂದಲೂ ಇದೇ ರೀತಿ. ನನ್ನ ವಿರುದ್ಧ ಅವರ ಕುಟುಂಬದಿಂದ ದೊಡ್ದ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.
ಜೈಲಿಗೆ ಹೋಗೋ ದಿನ ಹತ್ತಿರ ಬಂದಿದೆ ಎಂದಿದ್ದಾರೆ. ಪಾಪ ಕುಮಾರಸ್ವಾಮಿ ಏನೋ ಆಸೆಪಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಹೆಚ್ ಡಿಕೆ ಏನೇನು ಮಾತನಾಡಿದ್ದಾರೆ ಅದೆಲ್ಲದಕ್ಕೂ ಹಬ್ಬದ ಬಳಿಕ ಉತ್ತರ ಕೊಡುತ್ತೇನೆ ಎಂದು ಟಾಂಗ್ ನೀಡಿದರು.