HomeLatest NewsBIG NEWS: ಜಾತಿಗಣತಿ ಸಮೀಕ್ಷೆಗೆ ಗೈರು: 6 ಅಂಗನವಾಡಿ ಕಾರ್ಯಕರ್ತರು ಸಸ್ಪೆಂಡ್; 57 ಸಿಬ್ಬಂದಿಗೆ ನೋಟಿಸ್

BIG NEWS: ಜಾತಿಗಣತಿ ಸಮೀಕ್ಷೆಗೆ ಗೈರು: 6 ಅಂಗನವಾಡಿ ಕಾರ್ಯಕರ್ತರು ಸಸ್ಪೆಂಡ್; 57 ಸಿಬ್ಬಂದಿಗೆ ನೋಟಿಸ್

ರಾಯಚೂರು: ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ- ಜಾತಿಗಣತಿ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆ ಕಾರ್ಯದಲ್ಲಿ ಗೈರಾದ ಅಥವಾ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗುತ್ತಿದೆ.

ರಾಯಚೂರು ಜಿಲ್ಲೆಯಲ್ಲಿ ಆರು ಅಂಗನವಾಡಿ ಕಾರ್ಯಕರ್ತೆಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಜಾತಿಗಣತಿ ಸಮೀಕ್ಷೆಗೆ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಆರು ಅಂಗನವಾಡಿ ಕಾರ್ಯಕರ್ತೆಯರನ್ನು ವಜಾಗೊಳಿಸಲಾಗಿದೆ.

ಇನ್ನು 57 ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಸಮೀಕ್ಷಾ ಕಿಟ್ ಪಡೆದು ಸೇವೆ ಸರ್ವೆ ಆರಂಭಿಸಿಲ್ಲ ಎಂದು ದೇವದುರ್ಗದ ತಹಶಿಲ್ದಾರ್ ನೀಡಿದ್ದ ವರದಿ ಅನ್ವಯ ಆರು ಅಂಗನವಾಡಿ ಕಾರ್ಯಕರ್ತೆಯರನ್ನು ವಜಾಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಂಡಮ್ಮ, ರಂಗಮ್ಮ, ಮುತ್ತಮ್ಮ, ಚಾಂದಬಿ, ವಿಜಯಲಕ್ಷ್ಮೀ, ರೇಣುಕಾ ವಜಾಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು. ಲಿಂಗಸಗೂರಿನಲ್ಲಿ ಸಮೀಕ್ಷೆಗೆ ನಿರಂತರವಾಗಿ ಗೈರಾಗಿರುವ 57 ಜನ ಸಮೀಕ್ಷಾ ಸಿಬ್ಬಂದಿಗಳಿಗೆ ನೋಟಿಸ್ ನೀಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular