ದುಬೈನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ ಗೆಲುವು ದಾಖಲಿಸಿದೆ. ಏಷ್ಯಾಕಪ್ ಗೆದ್ದು ಟೀ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೇ ಸಂಭ್ರಮಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ವೀಡಿಯೋ ಹಂಚಿಕೊಂಡಿದ್ದಾರೆ.ಎಸಿಸಿ ಮುಖ್ಯಸ್ಥ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತೀಯ ಆಟಗಾರರು ನಿರಾಕರಿಸಿದ ನಂತರ ಪಂದ್ಯದ ನಂತರದ ಪ್ರದಾನ ಸಮಾರಂಭವು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು.
ಮೊದಲ ಪಂದ್ಯದಲ್ಲಿ ಹ್ಯಾಂಡ್ ಶೇಕ್ ನಿರಾಕರಿಸಿದ ಭಾರತ ಇದೀಗ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದೆ. ಟ್ರೋಫಿ ಇಲ್ಲದೇ ಟೂರ್ನ್ ಮೆಂಟ್ ಮುಗಿದಿದ್ದು ಇದೇ ಮೊದಲು. ಆದರೆ ನನ್ನ ನಿಜವಾದ ಟ್ರೋಫಿ ನನ್ನ 14 ಆಟಗಾರರು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಭಾರತ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದ ಕಾರಣ ಭಾರತ ಟ್ರೋಫಿ ಗೆದ್ದಿದ್ದರು ನೀಡಲಿಲ್ಲ. ಈ ಬಗ್ಗೆ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.
Indian Team celebrated with imaginary Asia Cup Trophy😭😂
— Rajiv (@Rajiv1841) September 28, 2025
They have just roasted Mohsin Naqvi & Pakistan throughout the tournament🤣pic.twitter.com/6Hm7qWxnBq