ವಾಷಿಂಗ್ಟನ್: ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣ ಮುಂದುವರೆದಿದೆ. ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 8 ಜನ ಗಾಯಗೊಂಡಿದ್ದಾರೆ.
ಮಿಚಿಗನ್ ನ ಮಾರ್ಮನ್ ಚರ್ಚ್‌ನಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 4 ಜನರು ಸಾವನ್ನಪ್ಪಿದ್ದಾರೆ. 8 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಥಾಮಸ್ ಜಾಕೋಬ್ ಸ್ಯಾನ್ ಫೋರ್ಡ್ ಎಂಬಾತ ಕೃತ್ಯವೆಸಗಿದ್ದಾನೆ. ಇದು ಕ್ರೈಸ್ತರ ಮೇಲೆ ನಡೆದ ದಾಳಿ ಎಂದು ಘಟನೆಯನ್ನು ತೀವ್ರವಾಗಿ ಖಂಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಿಚಿಗನ್ ನಲ್ಲಿರುವ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ ಚರ್ಚ್ ಮೇಲೆ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ್ದಾನೆ. ಕನಿಷ್ಠ ನಾಲ್ವರು ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಕೋರನನ್ನು ಪೊಲೀಸರು ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
40 ವರ್ಷದ ಶಂಕಿತ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್, ಡೆಟ್ರಾಯಿಟ್‌ನಿಂದ ವಾಯುವ್ಯಕ್ಕೆ ಸುಮಾರು 60 ಮೈಲುಗಳಷ್ಟು ದೂರದಲ್ಲಿರುವ ಗ್ರ್ಯಾಂಡ್ ಬ್ಲಾಂಕ್ ಟೌನ್‌ಶಿಪ್‌ನಲ್ಲಿರುವ ಚರ್ಚ್‌ನ ಮುಂಭಾಗದ ಬಾಗಿಲುಗಳ ಮೂಲಕ ತನ್ನ ವಾಹನವನ್ನು ಡಿಕ್ಕಿ ಹೊಡೆದು, ನೂರಾರು ಆರಾಧಕರ ಮೇಲೆ ಆಕ್ರಮಣಕಾರಿಯಾಗಿ ಗುಂಡು ಹಾರಿಸಿದ್ದಾನೆ. ಚರ್ಚ್‌ಗೆ ಶಂಕಿತ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.