ಮೈಸೂರು : ವಿಶ್ವವಿದ್ಯಾನಿಲಯದ 2025-26ರ (ಜುಲೈ/ಆಗಸ್ಟ್ ಆವೃತ್ತಿ) ಶೈಕ್ಷಣಿಕ ಸಾಲಿನ ಬಿ.ಇಡಿ ಪ್ರವೇಶ ಪರೀಕ್ಷೆಯನ್ನು (B.Ed CET) ದಿನಾಂಕ: 28.09.2025 ರಂದು ನಡೆಸಲಾಗಿದ್ದು, ಸದರಿ ಪರೀಕ್ಷೆಯ ಕೀ-ಉತ್ತರಗಳನ್ನು (Key Answer) ದಿನಾಂಕ: 28.09.2025 ರಂದು ಭಾನುವಾರ ಸಂಜೆ 6.00 ಗಂಟೆಗೆ ವಿಶ್ವವಿದ್ಯಾನಿಲಯದ ಅಧಿಕೃತ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.
ಕೀ-ಉತ್ತರಗಳ ಬಗ್ಗೆ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಅಭ್ಯರ್ಥಿಗಳು ಸೂಕ್ತದಾಖಲೆಗಳೊಂದಿಗೆ ದಿನಾಂಕ: 30.09.2025ರ ಮಂಗಳವಾರ ಮಧ್ಯಾಹ್ನ 12.00 ಗಂಟೆಯ ಒಳಗೆ ಇ-ಮೇಲ್ ಮೂಲಕ ಮಾತ್ರ re-ksouexam@ka.gov.in ಸಲ್ಲಿಸುವಂತೆ ಸೂಚಿಸಲಾಗಿದೆ. ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.




