ಬೆಂಗಳೂರು: ತಮಿಳುನಾಡಿನ ಕರೂರು ಕಾಲ್ತುಳಿತ ದುರಂತದಲ್ಲಿ 40 ಜನರು ಸಾವನ್ನಪ್ಪಿರುವ ಘಟನೆ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳುರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಅದೇ ದೊಡ್ದ ಆಘಾತವಾಗಿತ್ತು. ಈಗ ಕರೂರಿನಲ್ಲಿ ಅದಕ್ಕಿಂತ ದೊಡ್ದ ದುರಂತ ಸಂಭವಿಸಿದೆ. ಕರೂರು ಕಾಲ್ತುಳಿತ ದುರಂತದಿಂದಾಗಿ ಇಡೀ ದೇಶವೇ ಬೆಚ್ಚಿಬಿದ್ದಿದೆ ಎಂದು ತಿಳಿಸಿದ್ದಾರೆ.
ಇಂತಹ ಘಟನೆ ದೇಶದಲ್ಲಿ ಎಲ್ಲಿಯೂ ಅಗಿಲ್ಲ. ಕಾಲ್ತುಳಿತದಲ್ಲಿ ಚಿಕ್ಕ ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ಈ ದುರಂತ ಸಾರ್ವಜನಿಕರಿಗೂ ದಿಗ್ಭ್ರಾಂತಿಯುಂಟುಮಾಡಿದೆ. ಡಿಎಂಕೆ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಂಡು ವಿಜಯ್ ತಲೆಗೆ ಪ್ರಕರಣ ಕಟ್ಟುತ್ತಿದೆ. ಅವರು ರ್ಯಾಲಿಗೆ ಸ್ಥಳ ಕೇಳಿದ್ದು ಎಲ್ಲಿ? ಅಲ್ಲಿನ ಸರ್ಕಾರ ಅನುಮತಿ ಕೊಟ್ಟಿದ್ದು ಎಲ್ಲಿ? ವಿಜಯ್ ಬಂದ್ರು ರ್ಯಾಲಿ ಮಾಡಿ ಹೋದ್ರು. ಅವರದ್ದೂ ತಪ್ಪಿದೆ. ಘಟನೆ ಬಗ್ಗೆ ಕ್ಷಮೆ ಕೇಳಿಲ್ಲ. ಆಸ್ಪತ್ರೆಗೆ ಭೇಟಿ ನೀಡಿಲ್ಲ. ಈ ಘಟನೆಯಲ್ಲಿ ರಾಜ್ಯ ಸರ್ಕಾರದ ತಪ್ಪು ದೊಡ್ಡದಿದೆ. ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು, ಕಾನೂನು ಸುವ್ಯವಸ್ಥೆ ಕಾಪಾಡಿಲ್ಲ. ಜನರ ಸಾವಿಗೆ ಡಿಎಂಕೆ ಸರ್ಕಾರ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.