ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ನಲ್ಲಿ ಇತ್ತೀಚೆಗಷ್ಟೇ ನಿಧರರಾದ ಕನ್ನಡ ಕಾದಂಬರಿಕಾರ, ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ಸಾಧನೆ ಸ್ಮರಿಸಿದ್ದಾರೆ.
‘ಮನ್ ಕಿ ಬಾತ್’ 126ನೇ ಸಂಚಿಕೆಯಲ್ಲಿ ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಮೋದಿ, ನಾನು ಮತ್ತು ದೇಶ ಕಂಡ ಮಹಾನ್ ವಿಚಾರವಾದಿ ಹಾಗೂ ಚಿಂತಕ ಎಸ್.ಎಲ್. ಭೈರಪ್ಪ ಅವರನ್ನು ಕಳೆದುಕೊಂಡಿದ್ದೇವೆ. ಅವರೊಂದಿಗೆ ವ್ಯಕ್ತಿಗತ ಸಂಪರ್ಕ ಹೊಂದಿದ್ದೆ. ಅನೇಕ ಸಂದರ್ಭಗಳಲ್ಲಿ ಹಲವು ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಅವರ ಅನೇಕ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದವಾಗಿವೆ. ನಮ್ಮ ಮೂಲ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇರಬೇಕು, ಗೌರವ ತೋರಿಸಬೇಕು ಎಂಬುದನ್ನು ಅವರು ನಮಗೆ ಕಲಿಸಿ ಕೊಟ್ಟಿದ್ದಾರೆ. ಅವರ ಅಗಲಿಕೆಗೆ ಬಾವುಕ ವಿದಾಯ ಹೇಳುತ್ತೇನೆ. ಭೈರಪ್ಪ ಅವರೊಂದಿಗಿನ ಒಡನಾಟ ಪ್ರೇರಣದಾಯಕ. ಅವರ ಕೃತಿಗಳು ಯುವ ಜನತೆಗೆ ದಾರಿ ದೀಪವಾಗಿವೆ. ಅವರ ಕೃತಿಗಳನ್ನು ನಮ್ಮ ಯುವಕರು ಹೆಚ್ಚಾಗಿ ಓದಬೇಕು ಎಂದು ಮೋದಿ ಹೇಳಿದ್ದಾರೆ.