ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 12 ನಾಳೆ ಭಾನುವಾರ ಸೆಪ್ಟೆಂಬರ್ 28 ರಿಂದ ಆರಂಭವಾಗಲಿದೆ. ಇದೇ ವೇಳೆ ಯುವಕನೊಬ್ಬ ‘ಬಿಗ್ ಬಾಸ್’ ಮನೆಗೆ ನನ್ನನ್ನು ಕಳಿಸದಿದ್ದರೆ ಬಾಂಬ್ ಇಟ್ಟು ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಮಮ್ಮಿ ಅಶೋಕ್ 19 ಹೆಸರಿನ instagram ಖಾತೆಯೊಂದಿರುವ ಅಶೋಕ್ ಎಂಬ ಯುವಕ ತನ್ನ ಖಾತೆಯಲ್ಲಿ ‘ಬಿಗ್ ಬಾಸ್’ ಮನೆಗೆ ನನ್ನನ್ನು ಕರೆದುಕೊಳ್ಳದಿದ್ದರೆ ಬಿಗ್ ಬಾಸ್ ಮನೆಗೆ ಬಾಂಬ್ ಬಿಟ್ಟು ಉಡಾಯಿಸುತ್ತೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾನೆ.
ಬಿಗ್ ಬಾಸ್ ಮನೆಯ ಮುಂದೆಯೇ ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಅಪ್ಲೋಡ್ ಮಾಡಿದ್ದು ಇದನ್ನು ಗಮನಿಸಿದ ಕುಂಬಳಗೋಡು ಠಾಣೆ ಪೋಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನನ್ನು ಠಾಣೆಗೆ ಕರೆತಂದು ಎಚ್ಚರಿಕೆ ನೀಡಿದ್ದಾರೆ. ಯುವಕ ವಿಡಿಯೋ ಬೆದರಿಕೆ ಹಾಕಿದ ಮತ್ತು ಎನ್.ಸಿ.ಆರ್. ದಾಖಲಾದ ವಿಡಿಯೋ ಹಂಚಿಕೊಂಡಿರುವ ಪೊಲೀಸರು ಜಾಲತಾಣದಲ್ಲಿ ಹಾಕಿದ ಬೆದರಿಕೆಯನ್ನು ನೇರವಾಗಿ ಮಾಡಿದ ಬೆದರಿಕೆಯಂತೆಯೇ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿಗರೇ ಗಮನಿಸಿ: ಆನ್ಲೈನ್ನಲ್ಲಿ ಮಾಡಿದ ಬೆದರಿಕೆಯನ್ನು ನೇರವಾಗಿ ಮಾಡಿದ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಟೈಪ್ ಮಾಡುವ ಮೊದಲು ಯೋಚಿಸಿ — ಏಕೆಂದರೆ ನಿಮ್ಮ ಪೋಸ್ಟ್ಗಳು ನಿಮ್ಮನ್ನು ಜೈಲಿಗೆ ಕಳುಹಿಸಬಹುದು.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 27, 2025
Bengaluru, remember: A threat made online is treated as seriously as one made in… pic.twitter.com/BpoTAuVOp0