ತಿರುವನಂತಪುರಂ: ವಲಸೆ ದಂಪತಿಯ ಎರಡು ವರ್ಷದ ಮಗಳನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದ ಆರೋಪಿಯನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ಎರಡು ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿದ್ದ 46 ವರ್ಷದ ಕಾಮುಕ ಕಬೀರ್ ಅಲಿಯಾಸ್ ಹಸನ್ ಕುಟ್ಟಿ, ಮಗುವಿನ ಮೇಲೆ ಲೈಂಗಿಕ ದೌಜನ್ಯವೆಸಗಿದ್ದ. ಪೋಕ್ಸೋ ಕೇಸ್ ನಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ತಿರುವನಂತಪುರಂ ಜಿಲ್ಲಾ ಸೆಷನ್ಸ್ ಕೋರ್ಟ್ ಇಂದು ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಅಕ್ಟೋಬರ್ ೩ರಂದು ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ.
ದೋಷಿ ಹಷನ್ ಕುಟ್ಟಿ ಈ ಹಿಂದೆಯೂ ಪೋಕ್ಸೋ ಕೇಸ್ ನಲ್ಲಿ ಬಂಧಿತನಾಗಿದ್ದ ಎಂದು ತಿಳಿದುಬಂದಿದೆ. ಕಳೆದ ವರ್ಷ ಹೈದರಾಬಾದ್ ನಿಂದ ಜೇನುತುಪ್ಪ ಮಾರಾಟ ಮಾಡಲು ಕೇರಳಕ್ಕೆ ಬಂದಿದ್ದ ದಂಪತಿ ಹಾಗೂ ಎರಡು ವರ್ಷದ ಮಗು ರಸ್ತೆ ಬದಿ ಮಲಗಿದ್ದ ವೇಳೆ ಮಗುವನ್ನು ಅಪಹರಿಸಿದ್ದ ಕಾಮುಕ ಹಸ ಕುಟ್ಟಿ ಮಗುವನ್ನು ಬ್ರಹ್ಮೋಸ್ ಏರೋಸ್ಪೇಸ್ ನ ಹಿಂದಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೌಜನ್ಯವೆಸಗಿದ್ದ. ಬಳಿಕ ಆಕೆ ಮೃತಪಟ್ಟಿದ್ದಾಳೆ ಎಂದುಕೊಂಡು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದ. ಮಗು ಕಾಣೆಯಾದ ಬಗ್ಗೆ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಹುಡುಕಾಟ ನಡೆಸಿದಾಗ ಮಾರನೆಯ ದಿನ ಬ್ರಹ್ಮೋಸ್ ಕಾಂಪೌಂಡ್ ಹಿಂಭಾಗದ ಗೋಡೆ ಬಳಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮಗುವನ್ನು ಬದುಕಿಸಲಾಗಿತ್ತು.