ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬುರುಡೆಯನ್ನು ದೆಹಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತು, ಸುಪ್ರೀಂ ಕೋರ್ಟ್ ಗೆ ಹೋಗಿದ್ದೂ ಗೊತ್ತು ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಧರ್ಮಸ್ಥಳ ವಿಚಾರವಾಗಿ ವಾಸ್ತವಾಂಶವನ್ನು ಜನರಿಗೆ ತಿಳಿಸಬೇಕು ಎಂಬುದಷ್ಟೇ ನಮ್ಮ ಆಸೆ. ರಾಜಕೀಯವಗಿ ಯಾರು ಏನು ಬೇಕಾದರೂ ಮಾತನಾಡಬಹುದು. ಆದರೆ ವಾಸ್ತವಾಂಶ ಗೊತ್ತಾಗಬೇಕು ಅಷ್ಟೇ ಎಂದರು.
ನಾನು ಮಾತನಾಡಿದರೆ ಸರ್ಕಾರದ ಹೇಳಿಕೆ ಆಗುತ್ತದೆ. ಗೃಹ ಸಚಿವರು, ಸಿಎಂ ಅವರು ಅಧಿಕೃತ ಹೇಳಿಕೆ ಕೊಡುತ್ತಾರೆ ಎಂದರು. ಇನ್ನು ಬುರುಡೆ ದೆಹಲಿಗೆ ಕೊಂಡೊಯ್ದಿದ್ದು, ಸುಪ್ರೀಂ ಕೋರ್ಟ್ ಗೆ ಹೋಗಿದ್ದು, ಪಿಐಎಲ್ ಸಲ್ಲಿಸಿದ್ದು, ಅದು ರಿಜೆಕ್ಟ್ ಆಗಿದ್ದು ಎಲ್ಲವೂ ಗೊತ್ತು. ಆದರೆ ಪೊಲೀಸರು ತನಿಖೆ ನಡೆಸಿತ್ತಿದ್ದಾರೆ. ಅವರು ವರದಿ ಕೊಡುತ್ತಾರೆ ಎಂದರು.