ಕಲಬುರಗಿ : ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಿರಂತರ ಮಳೆ ಮತ್ತು ಉಕ್ಕಿ ಹರಿಯುವ ನದಿಗಳು ಕಲಬುರಗಿಯ 36 ಹಳ್ಳಿಗಳಿಗೆ ಅಪಾರ ಸಂಕಷ್ಟ ತಂದಿವೆ. ನಮ್ಮ ಜನರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕುಟುಂಬಗಳನ್ನು ಸುರಕ್ಷಿತ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರವು SDRF ಮತ್ತು ಲಭ್ಯವಿರುವ ಪ್ರತಿಯೊಂದು ಸಂಪನ್ಮೂಲವನ್ನು ನಿಯೋಜಿಸಿದೆ. ಒಟ್ಟು 36 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿ 1,500 ಕ್ಕೂ ಹೆಚ್ಚು ಜನರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.
ಈ ಕಷ್ಟದ ಸಮಯದಲ್ಲಿ ಜನರು ಮತ್ತು ಅವರ ಜಾನುವಾರುಗಳನ್ನು ರಕ್ಷಿಸಲು, ಜಿಲ್ಲಾಡಳಿತವು ಸ್ವಯಂಸೇವಕರ ಜೊತೆಗೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ. ವಾಡಿಕೆಗಿಂತ ಹೆಚ್ಚು ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯು ಈಗ ಅಕ್ಷರಶಃ ಮಲೆನಾಡಿನಂತಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಅಕಾಲಿಕ ಮಳೆಯು ಅಪಾರವಾಗಿ ರೈತರ ಬೆಳೆಯನ್ನು ಹಾನಿ ಮಾಡಿದೆ. ಆದರೆ ರೈತರೊಂದಿಗೆ ನಮ್ಮ ಸರ್ಕಾರವಿದೆ, ಬೆಳೆ ಕಳೆದುಕೊಂಡರೂ ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ. ಈಗಾಗಲೇ ಜಂಟಿ ಸಮೀಕ್ಷೆ ನಡೆಸುತ್ತಿದ್ದು ಹಾನಿಯ ಪ್ರಮಾಣದ ಬಗ್ಗೆ ಪೂರ್ಣ ವರದಿ ಬಂದ ನಂತರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಭೀಮಾ ನದಿಯು ಉಕ್ಕಿ ಹರಿಯುತ್ತಿರುವ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದೆ, ನೆರೆಯಿಂದ ಮನೆ, ಆಸ್ತಿ ಪಾಸ್ತಿ ಹಾನಿಯಾದವರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಸರ್ಕಾರವು ಕಲಬುರಗಿ ಜಿಲ್ಲೆಯ ಜನರೊಂದಿಗಿದೆ, ಯಾವುದೇ ಪರಿಸ್ಥಿತಿಗಳನ್ನು ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದ್ದು, ಜನರ ಹಿತ ಕಾಪಾಡುವಲ್ಲಿ ಬದ್ಧತೆಯಿಂದ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ವಾಡಿಕೆಗಿಂತ ಹೆಚ್ಚು ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯು ಈಗ ಅಕ್ಷರಶಃ ಮಲೆನಾಡಿನಂತಾಗಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 26, 2025
ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಅಕಾಲಿಕ ಮಳೆಯು ಅಪಾರವಾಗಿ ರೈತರ ಬೆಳೆಯನ್ನು ಹಾನಿ ಮಾಡಿದೆ.
ಆದರೆ ರೈತರೊಂದಿಗೆ ನಮ್ಮ ಸರ್ಕಾರವಿದೆ, ಬೆಳೆ ಕಳೆದುಕೊಂಡರೂ ಭರವಸೆ… pic.twitter.com/lrXHiBU9W0