ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಿಂದ ಬೆಂಗಳೂರಿಗೆ ಬರಬೇಕಿದ್ದ ಆಕಾಶ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ವಿಮಾನ ಹಾರಾಟ ನಡೆಸಿಲ್ಲ. ಪ್ರಯಾಣಿಕರು ಪರದಾಡಿದ ಪ್ರಸಂಗ ನಡೆದಿದೆ.
ಆಕಾಶ್ ಏರ್ ಲೈನ್ಸ್ ವಿಮಾನ ಕ್ಯೂಪಿ 1424 ಫ್ಲೈಟ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ವಿಮಾನ ಟೇಕ್ ಆಫ್ ಆಗಿಲ್ಲ. ಸುಮಾರು 143 ಪ್ರಯಾಣಿಕರೊಂದಿಗೆ ವಿಮಾನ ಗುರುವಾರ ಸಂಜೆ ೭:೫೫ಕ್ಕೆ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹಾರಾಟ ನಡೆಸಬೇಕಿತ್ತು. ಬೋರ್ಡಿಂಗ್ ಕೂಡ ಆರಂಭವಾಗಿತ್ತು. ಈ ವೇಳೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ತಕ್ಷಣ ವಿಮಾನ ಸಿಬ್ಬಂದಿ ಎಂಜಿನಿಯರ್ ಗಮನಕ್ಕೆ ತಂದರು.
ತಾಂತ್ರಿಕ ಸಜ್ಮಸ್ಯೆ ಸರಿಪಡಿಸಲು ಯತ್ನಿಸಲಾಯಿತಾದರೂ ಸರಿಪಡಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ವಿಮಾನಯಾನ ಸಂಸ್ಥೆ ಎಲ್ಲಾ ಪ್ರಯಾಣಿಕರಿಗೂ ವಾರಣಾಸಿಯಲ್ಲಿ ಹೋಟೆಲ್ ವೊಂದರಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ ಘಟನೆ ನಡೆದಿದೆ.