ಆನೇಕಲ್: ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಸಂತು ಎಂಬಾತನೊಂದಿಗೆ ಓಡಿಹೋಗಿದ್ದ ಪತ್ನಿ ಲೀಲಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ ಆಕೆಗೆ ತಾನು ಯಾವುದೇ ಹಿಂಸೆ-ನೋವು ಕೊಟ್ಟಿಲ್ಲ. ಮನೆಗೆ ವಾಪಸ್ ಬರುವಂತೆ ಗೋಗರೆದು ನಾಟಕವಾಡುತ್ತಿದ್ದ ಪತಿ ಮಂಜ ಇದೀಗ ತನ್ನ ಮತ್ತೊಂದು ಖರಾಳ ಮುಖ ತೋರಿಸಿದ್ದು, ಪತ್ನಿ ಹತ್ಯೆಗೆ ಯತ್ನಿಸಿದ್ದಾನೆ.
ಲೀಲಾ ಪತಿ ಹಾಗೂ ಮಕ್ಕಳನ್ನು ಬಿಟ್ಟು ಸಂತು ಅಲಿಯಾಸ್ ಸಂತೋಷ್ ಜೊತೆ ಹೋದಾಗ ಲೀಲಾ ಪತಿಗೆ ಮೋಸಮಾಡಬಾರದಿತ್ತು ಎಂದು ಎಲ್ಲರೂ ಅಲವತ್ತುಕೊಂಡಿದ್ದರು. ಆದರೆ ಇದೀಗ ಮಂಜುನಾಥ್ ತನ್ನ ರಾಕ್ಷಸ ಅವತಾರ ತೋರಿಸಿದ್ದು, ಜನರು ಶಾಕ್ ಆಗಿದ್ದಾರೆ.
ತಡರಾತ್ರಿ ಕಂಠ ಪೂರ್ತಿ ಕುಡಿದು ಬಂದ ಮಂಜುನಾಥ್, ಲೀಲಾ ಹಾಗೂ ಸಂತೋಷ್ ಇರುವ ಮನೆಗೆ ನುಗ್ಗಿದ್ದಾನೆ ಲೀಲಾಳ ಕಣ್ಣಿಗೆ ಖಾರದ ಪುಡು ಎರಚಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಇದೇ ವೇಳೆ ಸಂತೋಷ್ ತಡೆದಿದ್ದಾನೆ. ಆತನಿಗೂ ಕಣ್ಣಿಗೆ ಖಾರದ ಪುಡಿ ಎಚ್ಚಿ ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಹಲ್ಲೆಗೊಳಗಾಗಿರುವ ಸಂತೋಷ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲೀಲಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಂಜುನಾಥ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತು ಹಾಗೂ ಲೀಲಾ ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಮಂಜು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿಡಿಯೋ ಹರಿಬಿಟ್ಟಿದ್ದು, ತಾನು ಮಕ್ಕಳನ್ನು ನೋಡಲೆಂದು ಮನೆ ಬಳಿ ಹೋಗಿದ್ದೆ. ಆದರೆ ಸಂತು ಹಾಗೂ ಲೀಲಾ ಬಿಟ್ಟಿಲ್ಲ. ಈ ವೇಳೆ ಐದಾರು ಜನರನ್ನು ಬಿಟ್ಟು ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ ಎಂದು ಕಥೆ ಕಟ್ಟಿದ್ದಾನೆ.
ಸದ್ಯ ಹುಳಿಮಾವು ಪೊಲೀಸರು ಮಂಜುನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.