HomeLatest NewsSHOCKING: ಅಕ್ರಮ ಮದರಸಾ ಶೌಚಾಲಯದಲ್ಲಿ 40 ಬಾಲಕಿಯರು ಬಂಧಿ

SHOCKING: ಅಕ್ರಮ ಮದರಸಾ ಶೌಚಾಲಯದಲ್ಲಿ 40 ಬಾಲಕಿಯರು ಬಂಧಿ

ಬಹ್ರೈಚ್: ಉತ್ತರ ಪ್ರದೇಶದ ಅಕ್ರಮ ಮದರಸಾದ ಶೌಚಾಲಯದೊಳಗೆ 40 ಅಪ್ರಾಪ್ತ ಬಾಲಕಿಯರು ಕೂಡಿಹಾಕಿ ಬೀಗ ಹಾಕಿರುವುದು ಪತ್ತೆಯಾಗಿದೆ.

ಇಲ್ಲಿನ ನೋಂದಣಿಯಾಗದ ಮದರಸಾದ ಶೌಚಾಲಯದೊಳಗೆ 9 ರಿಂದ 14 ವರ್ಷ ವಯಸ್ಸಿನ 40 ಬಾಲಕಿಯರು ಬಂಧಿಯಾಗಿರುವುದು ಗುರುವಾರ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಯಾಗಪುರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್(SDM) ಅಶ್ವಿನಿ ಕುಮಾರ್ ಪಾಂಡೆ ಮಾಹಿತಿ ನೀಡಿ, ಪಯಾಗಪುರ ತಹಸಿಲ್ ವ್ಯಾಪ್ತಿಯ ಪಹಲ್ವಾರಾ ಗ್ರಾಮದ ಮೂರು ಅಂತಸ್ತಿನ ಕಟ್ಟಡದೊಳಗೆ ಅಕ್ರಮ ಮದರಸಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಪದೇ ಪದೇ ದೂರುಗಳು ಬಂದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬುಧವಾರ, ನಾವು ಪರಿಶೀಲನೆಗಾಗಿ ಕಟ್ಟಡಕ್ಕೆ ಹೋದಾಗ, ಮದರಸಾ ನಿರ್ವಾಹಕರು ಆರಂಭದಲ್ಲಿ ನಮ್ಮನ್ನು ಮೇಲಕ್ಕೆ ಹೋಗದಂತೆ ತಡೆಯಲು ಪ್ರಯತ್ನಿಸಿದರು. ಪೊಲೀಸರ ಸಮ್ಮುಖದಲ್ಲಿ, ನಾವು ಆವರಣವನ್ನು ಪ್ರವೇಶಿಸಿದಾಗ, ಟೆರೇಸ್‌ನಲ್ಲಿರುವ ಶೌಚಾಲಯ ಲಾಕ್ ಆಗಿರುವುದನ್ನು ನಾವು ಕಂಡುಕೊಂಡೆವು ಎಂದು ಅವರು ಹೇಳಿದ್ದಾರೆ.

ಮಹಿಳಾ ಪೊಲೀಸ್ ಸಿಬ್ಬಂದಿ ಬಾಗಿಲು ತೆರೆದಾಗ, ಶೌಚಾಲಯದೊಳಗೆ ಅಡಗಿಕೊಂಡಿದ್ದ 9 ರಿಂದ 14 ವರ್ಷ ವಯಸ್ಸಿನ 40 ಬಾಲಕಿಯರು ಒಬ್ಬೊಬ್ಬರಾಗಿ ಹೊರಬಂದರು. ಹುಡುಗಿಯರು ಭಯಭೀತರಾಗಿ ಕಾಣುತ್ತಿದ್ದರು ಮತ್ತು ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಮೊಹಮ್ಮದ್ ಖಾಲಿದ್ ಅವರನ್ನು ಸಂಸ್ಥೆಯ ನೋಂದಣಿ ಮತ್ತು ಕಾನೂನುಬದ್ಧತೆಯನ್ನು ಪರಿಶೀಲಿಸಲು ಕೇಳಲಾಗಿದೆ.

ಖಾಲೀದ್ ಅವರ ಪ್ರಕಾರ, ಮದರಸಾ ಸುಮಾರು ಮೂರು ವರ್ಷಗಳಿಂದ ನೋಂದಣಿ ಇಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular