ಹೈದರಾಬಾದ್: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ, ನ್ಯಾಲಯದಿಂದ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ವಿಜಯವಾಡದ ದೇವರಪಲ್ಲಿ ಮಂಡಲದ ಬಳಿ ನಡೆದಿದೆ.
ಕೈದಿ ಬಟ್ಟುಲ ಪ್ರಭಾಕರ ಎಂಬಾತ ಒಂದು ಕೈಯಲ್ಲಿ ಕೈಕೋಳ ಹಾಕಿಕೊಂಡೇ ಎಸ್ಕೇಪ್ ಆಗಿದ್ದಾನೆ. ನ್ಯಾಯಾಲಯದ ವಿಚಾರಣೆ ಬಳಿಕ ಬಟ್ಟುಲ ಪ್ರಭಾಕರ್ ನನ್ನು ಜೈಲಿಗೆ ಕರೆತರಲಾಗುತ್ತಿತ್ತು. ಈ ವೇಳೆ ದೇವರಪಲ್ಲಿ ಮಂಡಲದ ದುಡ್ಡುಕುರು ಗ್ರಾಮದ ಬಳಿ ಕೈದಿ ಪರಾರಿಯಾಗಿದ್ದಾನೆ.
ಒಂದು ಕೈಯಲ್ಲಿ ಕೈಕೋಳವಿದ್ದು, ಬಿಳಿ ಟೀಶರ್ಟ್, ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದಾನೆ. ಆತನ ಬಗ್ಗೆ ಯಾವುದೇ ,ಆಹಿತಿ ಸಿಕ್ಕಿದ್ದಲ್ಲಿ ದೇವರಪಲ್ಲಿ ಇನ್ಸ್ ಪೆಕ್ಟರ್ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ ಆತನನ್ನು ಹಿಡಿಯಲು ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ.
ಕೈದಿ ಪ್ರಭಾಕರ ಆಂಢ್ರ ಹಾಗೂ ತೆಲಂಗಾಣಗಳಲ್ಲಿ 100ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ, ಕಳ್ಲತನ, ದರೋಡೆ ಕೇಸ್ ನಲ್ಲಿ 2020ರಲ್ಲಿ ವಿಶಾಖಾಪಟ್ಟಣಂ ನಲ್ಲಿ ಆತನನ್ನು ಬಂಧಿಸಲಾಗಿತ್ತು.