ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ಸಿಬ್ಬಂದಿಗೆ ಶೀಘ್ರವೇ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಕೇಂದ್ರ ಕಚೇರಿ, ಆರು ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ, ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರು, ಬೋಧಕೇತರ ಸಿಬ್ಬಂದಿಗೆ ಆಧಾರ್ ಸಹಿತ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಹಿನ್ನೆಲೆಯಲ್ಲಿ ಬೋಧಕರು, ಅತಿಥಿ ಉಪನ್ಯಾಸಕರು ತಮ್ಮ ವಿವರಗಳನ್ನು ಸೆ. 30ರೊಳಗೆ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಆಯುಕ್ತರು ಆದೇಶಿಸಿದ್ದಾರೆ. ಮೊಬೈಲ್ ಆಪ್ ಗಳನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಕಡ್ಡಾಯ ಹಾಜರಿ ದಾಖಲಿಸಬೇಕು. ಈ ಉಸ್ತುವಾರಿ ನೋಡಿಕೊಳ್ಳಲು ಇಲಾಖೆ ವ್ಯಾಪ್ತಿಯ ಪ್ರತಿ ಕಚೇರಿ, ಕಾಲೇಜುಗಳಲ್ಲಿ ಅಧಿಕಾರಿ, ಬೋಧಕರನ್ನು ನೋಡಲ್ ಅಡ್ಮಿನ್ ಆಗಿ ನೇಮಕ ಮಾಡಬೇಕು. ಬಯೋಮೆಟ್ರಿಕ್ ಉಪಕರಣ ಖರೀದಿಸಲು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.