ಬೆಂಗಳೂರು : ಜಾತಿ ಗಣತಿ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನ ನಾಳೆ ಮಧ್ಯಾಹ್ನ 2 :30 ಕ್ಕೆ ಮುಂದೂಡಲಾಗಿದೆ.
ಕರ್ನಾಟಕದ ಜಾತಿ ಗಣತಿ ವಿರೋಧಿಸಿ ಹೈಕೋರ್ಟ್ಗೆ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಸಲ್ಲಿಕೆಯಾಗಿದ್ದು, ಇಂದು ವಿಚಾರಣೆ ನಡೆಸಿದ ಕೋರ್ಟ್ ವಾದ ವಿವಾದ ಆಲಿಸಿ ನಾಳೆ ಮಧ್ಯಾಹ್ನ 2 : 30 ಕ್ಕೆ ಮುಂದೂಡಿದೆ. ನಾಳೆ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಜಾತಿ ಗಣತಿ ಪ್ರಶ್ನಿಸಿ ಹಲವು ಸಮುದಾಯಗಳು ಸಲ್ಲಿಸಿದ ಅರ್ಜಿಗಳು ಸೋಮವಾರ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದೆ.ಇಂದಿನಿಂದ ರಾಜ್ಯದಲ್ಲಿ ಗಣತಿ ಕಾರ್ಯ ಆರಂಭವಾಗಿದ್ದು, ವಿಭಾಗೀಯ ಪೀಠ ಅರ್ಜಿಗಳ ವಿಚಾರಣೆ ನಡೆಸಿದೆ. ಹಲವು ಪ್ರಮುಖ ಜಾತಿ ಸಂಘಟನೆಗಳು ಗಣತಿಗೆ ತಡೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಗಣತಿ ಕಾರ್ಯಕ್ಕೆ ಮಧ್ಯಂತರ ತಡೆ ನೀಡಬೇಕೇ ಅಥವಾ ಬೇಡವೇ ಎನ್ನುವ ಕುರಿತು ನಾಳೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.