HomeLatest NewsSHOCKING: ಸಹೋದ್ಯೋಗಿಗಳಿಂದಲೇ ಅಸಭ್ಯ ವರ್ತನೆ, ಕಿರುಕುಳ: ನೊಂದ ಶಿಕ್ಷಕಿ ಆತ್ಮಹತ್ಯೆ

SHOCKING: ಸಹೋದ್ಯೋಗಿಗಳಿಂದಲೇ ಅಸಭ್ಯ ವರ್ತನೆ, ಕಿರುಕುಳ: ನೊಂದ ಶಿಕ್ಷಕಿ ಆತ್ಮಹತ್ಯೆ

ಹೈದರಾಬಾದ್: ಸಹೋದ್ಯೋಗಿಗಳಿಂದಲೇ ಅಸಭ್ಯ ವರ್ತನೆ, ಕಿರುಕುಳ ತಾಳಲಾರದೇ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದೆ. ಖಾಸಗಿ ಶಾಲೆಯ 29 ವರ್ಷದ ಶಿಕ್ಷಕಿ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಶಿಕ್ಷಕಿ ಅಸ್ಸಾಂ ಮೂಲದವರು. ಇಬ್ಬರು ಸಹೋದ್ಯೋಗಿಗಳು ಶಿಕ್ಷಕಿಗೆ ಕಿರುಕುಳ ನೀಡುತ್ತಿದ್ದರಂತೆ. ಅಸಭ್ಯವಾಗಿ ವರ್ತಿಸುತ್ತಿದರಂತೆ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಿಕ್ಷಕಿಯ ಪತಿ ಆದಿಬಾಟ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಪತ್ನಿಗೆ ಇಬ್ಬರು ಸಹೋದ್ಯೋಗಿಗಳು ಕಳೆದ ಆರು ತಿಂಗಳಿಂದ ಕಿರುಕುಳ ನೀಡುತ್ತಿದ್ದರು. ನಾನು ಕೆಲಸದ ನಿಮಿತ್ತ ಅಸ್ಸಾಂಗೆ ತೆರಳಿದ್ದೆ. ಈ ವೇಳೆ ಅವರ ಕಿರುಕುಳ ಇನ್ನಷ್ಟು ಹೆಚ್ಚಾಗಿದೆ. ಮನೆಗೆ ಬರುವಷ್ಟರಲ್ಲಿ ಪತ್ನಿ ಸಾವಿಗೆ ಶರಣಾಗಿದ್ದಾಳೆ ಎಂದು ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಇಬ್ಬರು ಶಿಕ್ಷಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular