ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ರಾಜ್ಯಾದ್ಯಂತ ನಾಳೆಯಿಂದ ಆರಂಭವಾಗಿಲಿದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಳೆಯಿಂದ ಸಮೀಕ್ಷೆ ಆರಂಭವಾಗಲ್ಲ ಎಂದು ಆಯೋಗದ ಅಧ್ಯಕ್ಷ ಮಧುಸೂಧನ್ ನಾಯ್ಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ನಾಯ್ಕ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಾಳೆಯಿಂದ ಸಮೀಕ್ಷೆ ಇರುವುದಿಲ್ಲ. ಕೆಲ ದಿನಗಳ ನಂತರ ಆರಂಭವಾಗಲಿದೆ ಎಂದರು.
ಜಿಬಿಎ ಸಿಬ್ಬಂದಿಗೆ ತರಬೇತಿ ಹಿನ್ನೆಲೆಯಲ್ಲಿ ಸಮೀಕ್ಷೆ ವಿಳಮ್ಬವಾಗಲಿದೆ. ಹಾಗಾಗಿ ನಾಳೆಯಿಂದ ಬೆಂಗಳೂರಿನಲ್ಲಿ ಸಮೀಕ್ಷೆ ನಡೆಯುವುದಿಲ್ಲ. ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ದಿನ ತಡವಾಗಿ ಸಮೀಕ್ಷೆ ಆರಂಭವಾಗಲಿದೆ ಎಂದು ತಿಳಿಸಿದರು. ಆದರೆ ಉಳಿದ ಕಡೆಗಳಲ್ಲಿ ನಾಳೆಯಿಂದಲೇ ಸಮೀಕ್ಷೆ ಆರಂಭವಗುತ್ತದೆ. ಓರ್ವ ಸಿಬ್ಬಂದಿ ಒಂದು ದಿನಕ್ಕೆ 7-8 ಮನೆಗಳ ಸಮೀಕ್ಷೆ ನಡೆಸುತ್ತಾರೆ. ಧರ್ಮ, ಜಾತಿ, ಉಪಜಾತಿ ಆಯ್ಕೆ ಜನರ ಆಯ್ಕೆಗೆ ಬಿಟ್ಟಿದ್ದು. ಗೊಂದಲವಿರುವ ಧರ್ಮ, ಜಾತಿಗಳ ಕಾಲಂ ಪಟ್ಟಿಯಿಂದ ನಿಷ್ಕ್ರಿಗೊಳಿಸಲಾಗಿದೆ. ಆದರೂ ಜನರು ಹೇಳಿದರೆ ಅದನ್ನು ಬರೆದುಕೊಳ್ಳುತ್ತೇವೆ ಎಂದು ಹೇಳಿದರು.