ಮಡಿಕೇರಿ : ಯುವದಸರಾ ಇವರ ಸಹಯೋಗದಿಂದ ಸೆಪ್ಟೆಂಬರ್, 26 ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಗರದ ಹೋಟೆಲ್ ರಾಜದರ್ಶನ್ ಸಭಾಂಗಣದಲ್ಲಿ ‘ಉದ್ಯೋಗ ಮೇಳ’ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ರಾಣಿ ಮದ್ರಾಸ್-ಮೈಸೂರು, ಕಿಯಾ ಕಾರ್ ಸೋ ರೂಮ್ ಕುಶಾಲನಗರ ಆಟೋಮೆಟಾಕ್ಸಲ್ ಮೈಸೂರು, ಗ್ರಾಸ್ ರೂಟ್ಸ್, ಮೈಸೂರು, ಕೂರ್ಗ್ ಜಂಗಲ್ ಕ್ಯಾಂಪ್ ರೆಸಾಟ್ರ್ಸ್ ಹೀರೋ, ಪರ್ಪಲ್ ಪ್ಯೂಮ್ಸ್ ರೆಸಾಟ್ರ್ಸ್ ಕುಶಾಲನಗರ, ಕೂರ್ಗ್ ವೈಲ್ಡ್ನೆಸ್ ರೆಸಾಟ್ರ್ಸ್,ಮಡಿಕೇರಿ, ಕ್ಲಬ್ ಮಹೀಂದ್ರ ರೆಸಾರ್ಟ್, ಮಡಿಕೇರಿ, ಬಾರ್ಚ್ವುಡ್ ರೆಸಾಟ್ರ್ಸ್ ಸುಂಟಿಕೊಪ್ಪ, ಟಗಿ ರೆಡೋಲೆಂಟ್ ರೆಸಾಟ್ರ್ಸ್ ಕುಶಾಲನಗರ, ಇಬ್ಬನಿ ರೆಸಾಟ್ರ್ಸ್, ಮಡಿಕೇರಿ, ಕಲ್ಯಾಣಿ ಮೋಟಾರ್ಸ್, ಮಡಿಕೇರಿ, ಹ್ಯೂಂಡಾಯಿ ಕಾರ್ ಸೋ ರೂಮ್, ಮಡಿಕೇರಿ, ಪೆಂಟಾಟೆಕ್ ಕಂಪ್ಯೂಟರ್ ಮಡಿಕೇರಿ, ಎಸ್ಎಲ್ಎನ್ ಕಾಫಿ ಕುಶಾಲನಗರ, ಕೂರ್ಗ್ ಹೋಂಡಾ ಬೈಕ್ ಸೋ ರೂಮ್, ಮಡಿಕೇರಿ ಹಾಗೂ ಡಾಬರ್ ಮ್ಯಾನ್ ಸೆಕ್ಯುರಿಟಿ ಮಂಗಳೂರು, ತಾಜ್ ರೆಸಾಟ್ರ್ಸ್ ಮಡಿಕೇರಿ, ಪ್ಯಾಲೇಸ್ ಟಯೋಟ ಕಾರ್ ಸೋ ರೂಮ್, ಮೈಸೂರು ಇವರು ತಮ್ಮ ಸಂಸ್ಥೆಗಳಲ್ಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ(ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗಮೇಳದಲ್ಲಿ ಹಾಜರಾಗುವಂತೆ ಕೋರಿದೆ.
ವಯಸ್ಸು 18 ರಿಂದ 35 ರೊಳಗಿರಬೇಕು. ಹೆಚ್ಚಿನ ಮಾಹಿತಿಗೆ ಜಾಬ್ ಕೋಆರ್ಡಿನೇಟರ್ -8296020826 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.