ಹಿರಿಯೂರು ತಾಲ್ಲೂಕಿನ ಕೊವೇರಹಟ್ಟಿಯ ಮೃತ ವಿದ್ಯಾರ್ಥಿನಿ ವರ್ಷಿತಾ ಅವರ ತಾಯಿಗೆ ಅಡುಗೆ ಸಹಾಯಕರ ನೌಕರಿ ಆದೇಶವನ್ನು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿತರಿಸಿದರು.
ಕೋವೇರಹಟ್ಟಿಯ ವರ್ಷಿತಾ ಎಂಬ ವಿದ್ಯಾರ್ಥಿನಿಯ ಮೃತ ದೇಹ ಇತ್ತೀಚೆಗೆ ಚಿತ್ರದುರ್ಗ ತಾಲ್ಲೂಕಿನ ಗೋನೂರು ಬಳಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಆರ್ಥಿಕವಾಗಿ ಆಧಾರ ನೀಡುವ ಉದ್ದೇಶದಿಂದ, ವರ್ಷಿತಾ ಅವರ ತಾಯಿ ಟಿ. ಜ್ಯೋತಿ ಅವರಿಗೆ ಬುರುಜನರೊಪ್ಪದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಸಹಾಯಕರ ಹುದ್ದೆಗೆ ನೇಮಕ ಮಾಡಲಾಗಿದೆ.ಈ ಸಂದರ್ಭದಲ್ಲಿ ಮೃತ ವಿದ್ಯಾರ್ಥಿನಿ ವರ್ಷಿತಾ ತಂದೆ ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಇದ್ದರು.