ಹೈದರಾಬಾದ್: ವಿಮಾನ ನಿಲ್ದಾಣದಲ್ಲಿ ಎರಡು ಬ್ಯಾಗ್ ಗಳಲ್ಲಿ ಬರೋಬ್ಬರಿ 3.6 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನ ಶಂಷಾಬಾದ್ ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಎರಡು ಬ್ಯಾಗ್ ಗಳು ಪತ್ತೆಯಾಗಿವೆ. ಅದರಲ್ಲಿ ಬರೋಬ್ಬರಿ 3.6 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಚಿನ್ನವಿದ್ದ ಎರಡು ಬ್ಯಾಗ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಒಂದು ಬ್ಯಾಗ್ ನಲ್ಲಿ ಸುಮಾರು 1.26 ಕೋಟಿ ಮೌಲ್ಯದ 1,261 ಗ್ರಾಂ ಚಿನ್ನ, ಮತ್ತೊಂದು ಬ್ಯಾಗ್ ನಲ್ಲಿ 2,117 ಗ್ರಾಂ ಚಿನ್ನ ಪತ್ತೆಯಾಗಿದೆ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಮೂವರನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯ ವ್ಯಕ್ತಿಯೊಬ್ಬ ಒಂದು ಬ್ಯಾಗ್ ನ್ನು ಏರ್ ಪೋರ್ಟ್ ನಲ್ಲಿ ಬಿಟ್ಟು ಹೋಗಿದ್ದ. ಆತನನ್ನು ಸೆ.16ರಂದು ಬಂಧಿಸಲಾಗಿತ್ತು. ಆತ ವಿಚಾರಣೆ ವೇಳೆ ಕುವೈತ್ ನಲ್ಲಿರುವ ವ್ಯಕ್ತಿಯೊಬ್ಬ ತನಗೆ ಈ ಬ್ಯಾಗ್ ಕೊಟ್ಟಿರುವುದಾಗಿ ಹೇಳಿದ್ದಾನೆ. ಬ್ಯಾಗ್ ನೀಡಿರುವ ವ್ಯಕ್ತಿಯನ್ನು ಆಂಧ್ರದ ಕಡಪದಲಿ ಬಂಧಿಸಲಾಗಿದೆ.
ಎರಡನೇ ಬ್ಯಾಗ್ ನಲ್ಲಿ ಕಬ್ಬಿಣದ ಪೆಟ್ಟಿಗೆಯಲ್ಲಿ 2.11 ಕೋಟಿ ಮೌಲ್ಯದ 2,117 ಗ್ರಾಂ ಚಿನ್ನ ಪತ್ತೆಯಗೈದೆ. ಈ ಬ್ಯಾಗ್ ಬಿಟ್ಟು ಹೋದ ವ್ಯಕ್ತಿ ಕಡಪ ಮೂಲದ ಮತ್ತೋರ್ವ ವ್ಯಕ್ತಿ. ಆತನನ್ನು ಸೆ.17 ರಂದು ಬಂಧಿಸಲಾಗಿದ್ದು, ಈತ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.