ಜೋಧ್ ಪುರ: ಮಹಡಿ ಮೇಲೆ ನಿಂತಿದ್ದ ಯುವಕ ನೀರು ಕುಡಿಯುತ್ತಾ ಹಿಂದಕ್ಕೆ ಹೆಜ್ಜೆ ಇಡುತ್ತಿದ್ದಂತೆ ಅಚಾನಕ್ ಆಗಿ ಬಾಲ್ಕನಿಯಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ರಾಜಸ್ಥಾನದ ಜೋಧ್ ಪುರದಲ್ಲಿ ಈ ಘಟನೆ ನಡೆದಿದ್ದು, ಯುವಕನೊಬ್ಬ ಎರಡನೇ ಮಹರಡಿಯಲ್ಲಿ ನಿಂತು ಕೈಯ್ಯಲ್ಲಿದ್ದ ಬಾಟಲಿಯಿಂದ ನೀರು ಕುಡಿಯ್ಯುತ್ತಾ ಹಿಂದಡಿಯಿಟ್ಟಿದ್ದಾನಷ್ಟೇ. ಹಿಂದೆ ಹೆಜ್ಜೆ ಇಡುತ್ತಿದ್ದಂತೆ ಬಾಲ್ಕನಿಯಿಂದ ಸೀದಾ ಕೆಳಗೆ ಬಿದ್ದಿದ್ದಾನೆ.
ಕಟ್ಟಡದ ಬಾಲ್ಕನಿಗೆ ಯಾವುದೇ ಗ್ರಿಲ್, ಗೋಡೆ ಇರಲಿಲ್ಲ. ಇದನ್ನು ಗಮನಿಸದೇ ಯುವಕ ಹಿಂದಕ್ಕೆ ಹೆಜ್ಜೆ ಇಡುತ್ತಿದ್ದಂತೆ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಜೀರ್ ಗಾಯಗೊಂಡಿರುವ ಯುವಕ. ಸಾಮಾಜಿಕ ಜಾಲತಾಣಗಳಲ್ಲಿ ಯುವಕ ಬಿದ್ದಿರುವ ದೃಶ್ಯ ವೈರಲ್ ಆಗಿದೆ.