ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್) ಆಯ್ಕೆ ಮಾಡಿಕೊಳ್ಳಲು ಸೆಪ್ಟೆಂಬರ್ 30 ಅಂತಿಮ ಗಡುವು ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಯುಪಿಎಸ್ ಆಯ್ಕೆಯನ್ನು ಸರ್ಕಾರ ನೀಡಿದೆ. ಆಗಸ್ಟ್ 25ರಂದು ಈಗಾಗಲೇ ಯುಪಿಎಸ್ ಆಯ್ಕೆ ಮಾಡಿಕೊಂಡವರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್ಪಿಎಸ್ ಗೆ) ಮರಳಲು ಒಂದು ಬಾರಿಯ ಅವಕಾಶ ಘೋಷಿಸಿತ್ತು. ಈಗ ಯುಪಿಎಸ್ ಗೆ ಮರಳಲು ಬಯಸುವವರ ನೌಕರರು ಮತ್ತು ನಿವೃತ್ತ ಪಿಂಚಣಿದಾರರಿಗೆ ಅಂತಿಮ ಅವಕಾಶ ನೀಡಲಾಗಿದೆ.
ಅರ್ಹ ನೌಕರರು ಕೊನೆಗಳಿಗೆಯಲ್ಲಿ ತರಾತುರಿಯಿಂದ ತಪ್ಪಿಸಿಕೊಳ್ಳಲು ಶೀಘ್ರವಾಗಿ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವಂತೆ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಎನ್ಪಿಎಸ್ ವ್ಯವಸ್ಥೆಯಲ್ಲಿ ಉಳಿದವರಿಗೆ ಸೆಪ್ಟೆಂಬರ್ 30ರ ನಂತರ ಮತ್ತೆ ಏಕೀಕೃತ ಪಿಂಚಣಿ ವ್ಯವಸ್ಥೆಗೆ ವರ್ಗಾವಣೆಯಾಗಲು ಅವಕಾಶವಿರುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.