ಇಲ್ಲೋರ್ವ ವ್ಯಕ್ತಿ ತನ್ನ ಅಸಾಮಾನ್ಯ ಆಹಾರ ಪದ್ಧತಿಯಿಂದ ಎಲ್ಲರ ಗಮನ ಸೆಳೆದಿದ್ದಾನೆ. ಅನ್ನ ಅಥವಾ ಚಪಾತಿಯಂತಹ ನಿಯಮಿತ ಆಹಾರವನ್ನು ಸೇವಿಸುವ ಬದಲು, ಅವರು “ವೇಸ್ಟ್ ಆಯಿಲ್ ” ಸೇವಿಸಿ ಬದುಕುತ್ತಾರೆ .
ಇನ್ಸ್ಟಾಗ್ರಾಮ್ ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು ಅವರ ಜೀವನಶೈಲಿಗೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. 30 ವರ್ಷಗಳಿಗೂ ಹೆಚ್ಚು ಕಾಲ ಅವರ ಆಹಾರದಲ್ಲಿ ಎಂಜಿನ್ ಎಣ್ಣೆ ಮಾತ್ರ ಸೇರಿದೆ ಎಂಬುದನ್ನು ಮಾತ್ರ ನಂಬಲು ಅಸಾಧ್ಯವಾಗಿದ್ದು, ವೈದ್ಯ ಲೋಕಕ್ಕೆ ಸವಾಲ್ ಆಗಿದೆ.
ಹಲವು ವರ್ಷಗಳಿಂದ ಎಂಜಿನ್ ಎಣ್ಣೆ ಕುಡಿದು ಬದುಕುತ್ತಿದ್ದರೂ, ಅವರನ್ನು ಎಂದಿಗೂ ಆಸ್ಪತ್ರೆಗೆ ದಾಖಲಿಸಲಾಗಿಲ್ಲ. ವೈದ್ಯಕೀಯ ಆರೈಕೆಯ ಅಗತ್ಯವಿರುವ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಅವರು ಎದುರಿಸಿಲ್ಲ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಏನಿದೆ ಪೋಸ್ಟ್ ನಲ್ಲಿ..?
ಕಳೆದ 33 ವರ್ಷಗಳಿಂದ ಶಿವಮೊಗ್ಗದ ಐಲ್ ಕುಮಾರ್ ಊಟವಿಲ್ಲದೇ ಬದುಕುತ್ತಿದ್ದಾರೆ. ಅನ್ನ, ಚಪಾತಿ ಬದಲು ಪ್ರತಿದಿನವೂ ಅವರು 7–8 ಲೀಟರ್ ಎಂಜಿನ್ ಆಯಿಲ್ ಮತ್ತು ಚಹಾ ಸೇವಿಸುತ್ತಾರೆ. ವೈದ್ಯರು ಹಾಗೂ ವಿಜ್ಞಾನಿಗಳು ಅಚ್ಚರಿಗೊಳಗಾಗಿದ್ದಾರೆ – ಏಕೆಂದರೆ ಅವರು ಆಸ್ಪತ್ರೆಗೂ ಹೋಗದೇ ಆರೋಗ್ಯವಾಗಿದ್ದಾರೆ. ಕುಮಾರ್ ಹೇಳುವಂತೆ, ಇದು ಅಯ್ಯಪ್ಪನ ಆಶೀರ್ವಾದದಿಂದ ಮಾತ್ರ ಸಾಧ್ಯ. ಇವರು ಇಂದು ಕರ್ನಾಟಕದ ಜೀವಂತ ಅದ್ಭುತ ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿದ್ದಾರೆ.