ಬೆಂಗಳೂರು: ಯುವತಿಯ ವಿಚಾರವಾಗಿ ಎಎಸ್ ಐ ಪುತ್ರ ಹಾಗೂ ಇನ್ನೋರ್ವ ಯುವಕ ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಬಳಿ ನಡೆದಿದೆ.
ಎಎಸ್ ಐ ಪುತ್ರ ಅರ್ಮಾನ್ ಹಾಗೂ ಅಜರುದ್ದೀನ್ ಎಂಬ ಇಬ್ಬರು ಹಾಡಹಗಲೇ ಹೊಡೆದಾಡಿಕೊಂಡು, ರಸ್ತೆಯಲ್ಲಿಯೇ ಹೊರಳಾಡಿದ್ದಾರೆ. ಅರ್ಮಾನ್ ಸಂಬಂಧಿಯೇ ಆಗಿರುವ ಯುವತಿ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುವಾಗಿದ್ದು, ಇದೇ ವಿಚಾರವಾಗಿ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.
ಸಾರ್ವಜನಿಕವಾಗಿಯೇ ಮನೆ ಮುಂದೆ ರಸ್ತೆಯಲ್ಲಿ ಬಡಿದಾಡಿಕೊಂಡು ರಸ್ತೆ ಮೇಲೆ ಬಿದ್ದು ಹೊರಳಾಡಿದರೂ ಗಲಾಟೆ ನಿಂತಿಲ್ಲ.