ತೆಲಂಗಾಣ : ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 300 ರೂ.ಗಾಗಿ ಆಟೋ ಚಾಲಕನನ್ನು ಕೊಲೆ ಮಾಡಲಾಗಿದೆ.
ಆಟೋ ಚಾಲಕ ನಯೀಮುದ್ದೀನ್ ಕೊಲೆ ಪ್ರಕರಣದ ಆರೋಪಿಗಳನ್ನು ಜಗ್ತಿಯಾಲ್ ಮಂಡಲದ ಪೊಲಾಸಾ ಉಪನಗರದಲ್ಲಿ ಬಂಧಿಸಲಾಗಿದೆ.
ಆಟೋ ಬಾಡಿಗೆ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ಬಿಹಾರದ ದರ್ಶನ್ ಸಾಹ್ನಿ ಮತ್ತು ಸುನಿಲ್ ಸಾಹ್ನಿ ಎಂಬುವವರು ನಯಿಮುದ್ದೀನ್ ಅವರನ್ನು ಕ್ರೂರವಾಗಿ ಥಳಿಸಿ ಕೊಂದಿದ್ದಾರೆ ಎಂದು ಡಿಎಸ್ಪಿ ರಘು ಚಂದರ್ ಹೇಳಿದ್ದಾರೆ. ಹೈದರ್ಪಳ್ಳಿಯ ಹೊರವಲಯದಲ್ಲಿರುವ ಶ್ರೀ ಮಣಿಕಂಠ ಅಕ್ಕಿ ಗಿರಣಿಯಲ್ಲಿ ಇಬ್ಬರೂ ಆರೋಪಿಗಳು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮೃತರ ಸಹೋದರನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿದ್ದೇವೆ ಎಂದು ಹೇಳಿದರು.