BIG NEWS : ಇಂದು ‘ಪ್ರಧಾನಿ ಮೋದಿ’ 75 ನೇ ಜನ್ಮದಿನ : ಶುಭಾಶಯ ಕೋರಿದ ಕೇಂದ್ರ ಸಚಿವ H.D ಕುಮಾರಸ್ವಾಮಿ

ನವದೆಹಲಿ : ಇಂದು ಪ್ರಧಾನಿ ಮೋದಿ 75 ನೇ ದಿನ ಜನ್ಮದಿನ, ಈ ಹಿನ್ನೆಲೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸರಿಸಾಟಿ ಇಲ್ಲದ ವಿಶ್ವನಾಯಕರಾಗಿ ವಿಶ್ವವೇ ನಿಬ್ಬೆರಗಾಗುವಂತೆ ಭಾರತವನ್ನು ಮುನ್ನಡೆಸುತ್ತಿರುವ ಹಾಗೂ ಆತ್ಮನಿರ್ಭರತೆಯ ಮೂಲಕ ವಿಕಸಿತ ಭಾರತ ಸಾಕಾರಗೊಳಿಸುವ ನಿಮ್ಮ ಸಂಕಲ್ಪವು ಸಮಸ್ತ ಭಾರತೀಯರು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದೆ.

ನಿಮ್ಮ ದೃಷ್ಟಿಕೋನವು ಭರವಸೆಯ ಬೆಳಕು ಮತ್ತು ದುರ್ಬಲರ ಕಲ್ಯಾಣ, ಸಬಲೀಕರಣಕ್ಕಾಗಿ ತಾವು ರೂಪಿಸಿರುವ ಕಾರ್ಯಕ್ರಮಗಳು ಜನಪರತೆಯ ಅನನ್ಯ ಮಾದರಿ ಹಾಗೂ ಪ್ರೇರಣೆ. ರಾಷ್ಟ್ರಕ್ಕಾಗಿ ನಿಮ್ಮ ಅವಿಶ್ರಾಂತ ಸಮರ್ಪಣೆಯ ದುಡಿಮೆ, ಶಿಸ್ತು ಮತ್ತು ಸಂಕಲ್ಪ ನಮಗೆ ದಾರಿದೀಪವಾಗಿದೆ. ನಿಮಗೆ ಆ ಭಗವಂತ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಿ ಭಾರತವನ್ನು ಪ್ರಗತಿಯ ಉನ್ನತಿಯತ್ತ ಮುನ್ನಡೆಸಿ ಜಾಗತಿಕ ಶಕ್ತಿಯನ್ನಾಗಿಸಲು ಸರ್ವಶಕ್ತಿಯನ್ನೂ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read