ಬೆಂಗಳೂರು: ಗ್ರೂಪ್ ಸಿ ಹುದ್ದೆ ಪರೀಕ್ಷೆಗೆ 6 ಕೃಪಾಂಕಗಳನ್ನು ಕರ್ನಾಟಕ ಲೋಕಸೇವಾ ಆಯೋಗ(KPSC) ಘೋಷಿಸಿದೆ. 22 ಪ್ರಶ್ನೆಗಳ ಉತ್ತರದಲ್ಲಿ ಮಾರ್ಪಾಡು ಮಾಡಲಾಗಿದೆ.
ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಪರಿಷ್ಕೃತ ಸರಿ ಉತ್ತರಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆ -1ರಲ್ಲಿ(ವಿಷಯ ಸಂಕೇತ 656) ಮೂರು ಕೃಪಾಂಕ ನೀಡಲಾಗಿದೆ. ಇದು ಸೇರಿ ಒಟ್ಟಾರೆ 16 ಪ್ರಶ್ನೆಗಳ ಉತ್ತರಗಳಲ್ಲಿ ಬದಲಾವಣೆ ಮಾಡಿದಂತಾಗಿದೆ.
ಇದರೊಂದಿಗೆ ಮೂರು ಪ್ರಶ್ನೆಗಳಿಗೆ ಪರ್ಯಾಯ ಉತ್ತರ ನೀಡಲಾಗಿದೆ. ವಿಷಯಾಧಾರಿತ ನಿರ್ದಿಷ್ಟ ಪತ್ರಿಕೆ -2ರಲ್ಲಿ(ವಿಷಯ ಸಂಕೇತ 657) ಮೂರು ಕೃಪಾಂಕ ನೀಡಲಾಗಿದ್ದು, ಮೂರು ಉತ್ತರಗಳನ್ನು ಬದಲಾಯಿಸಲಾಗಿದೆ. ಎರಡೂ ಪತ್ರಿಕೆಗಳಿಂದ ಒಟ್ಟಾರೆ 22 ಉತ್ತರಗಳನ್ನು ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಯಾವುದೇ ಮನವಿ, ಆಕ್ಷೇಪಣೆ ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ.