ಘಾಜಿಯಾಬಾದ್(ಉತ್ತರ ಪ್ರದೇಶ): ಅತ್ಯಾಚಾರ ಪ್ರಕರಣದಲ್ಲಿ ಹರಿಯಾಣ ನಟ, ನಿರ್ದೇಶಕ ಉತ್ತರ ಕುಮಾರ್ ಬಂಧಿಸಲಾಗಿದ್ದು, ಬಂಧನದ ಸ್ವಲ್ಪ ಸಮಯದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.
25 ವರ್ಷದ ಗಾಯಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ನಟ ಉತ್ತರ ಕುಮಾರ್ ಅವರನ್ನು ಸೋಮವಾರ ಬಂಧಿಸಲಾಯಿತು. ಆದರೆ ಬಂಧನದ ಸ್ವಲ್ಪ ಸಮಯದ ನಂತರ, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ದೂರು ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 1, 2020 ರಿಂದ ಜುಲೈ 31, 2023 ರವರೆಗೆ ಮದುವೆ ಮತ್ತು ಚಲನಚಿತ್ರಗಳಲ್ಲಿ ಪಾತ್ರಗಳ ಕೊಡಿಸುವ ನೆಪದಲ್ಲಿ ಕುಮಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳಾ ಗಾಯಕಿಯೊಬ್ಬರು ಜುಲೈ 18 ರಂದು ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹರಿಯಾಣ ಮೂಲದ ನಟ ಉತ್ತರ ಕುಮಾರ್ ಅವರನ್ನು ಬಂಧಿಸಲಾಗಿದೆ. ಗಾಜಿಯಾಬಾದ್ ಪೊಲೀಸರು ಅಮ್ರೋಹಾದ ಫಾರ್ಮ್ ಹೌಸ್ ನಿಂದ ನಟನನ್ನು ಬಂಧಿಸಿದ್ದಾರೆ. ಶಾಲಿಮಾರ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಅವರ ಮೇಲೆ ದೈಹಿಕ ಕಿರುಕುಳದ ಆರೋಪ ಮಾಡಿದ್ದಾರೆ. ವೈದ್ಯರು ಅವರ ಫಿಟ್ನೆಸ್ ವರದಿಯನ್ನು ನೀಡಿದ ನಂತರ ಕುಮಾರ್ ಅವರನ್ನು ಮತ್ತೆ ವಶಕ್ಕೆ ಪಡೆಯಲಾಗುವುದು ಎಂದು ಡಿಸಿಪಿ (ಟ್ರಾನ್ಸ್-ಹಿಂದಾನ್) ನಿಮಿಷ್ ಪಾಟೀಲ್ ತಿಳಿಸಿದ್ದಾರೆ.