ಲಖನೌ: ಪಿಜ್ಜಾ ಡೆಲಿವರಿ ಬಾಯ್ ಬೈಕ್ ತನ್ನ ಬೈಕ್ ಗೆ ಟಚ್ ಆಗಿದ್ದಕ್ಕೆ ನಡು ರಸ್ತೆಯಲ್ಲಿಯೇ ಕ್ಯಾತೆ ತೆಗೆದ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.
ಪಿಜ್ಜಾ ಡೆಲಿವರಿ ಬಾಯ್ ನನ್ನು ಹಿಡಿದು ಕಪಾಳಮೋಕ್ಷ ಮಾಡಿರುವ ಮಹಿಳೆ 30 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಲಖನೌ ನಲ್ಲಿ ನಡೆದಿದೆ.
ಜನದಟ್ಟಣೆಯ ಪ್ರದ್ರೇಶದಲ್ಲಿ ಪಿಜ್ಜಾ ಡೆಲಿವರಿ ಬಾಯ್ ತನ್ನ ಬೈಕ್ ನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಮಹಿಳೆಯ ಬೈಕ್ ಗೆ ಟಚ್ ಆಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲವಾದರೂ ಮಹಿಳೆ ಬೈಮ್ ನಲ್ಲಿಸಿ ಜಗಳ ಶುರುಮಾಡಿದ್ದಾಳೆ. ಪಿಜ್ಜಾ ಡೆಲಿವರಿ ಬಾಯ್ ನನ್ನು ಎಳೆದು ಕಪಾಳಕ್ಕೆ ಬಾರಿಸಿದ್ದಾಳೆ. ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾಳೆ. ಹಣ ಕೊಡು ಇಲ್ಲವಾದರೆ ಕೋರ್ಟ್ ಗೆ ಹೋಗುತ್ತೇನೆ ಎಂದು ಧಮ್ಕಿ ಹಾಕಿದ್ದಾಳೆ. ಸ್ಥಳದಲ್ಲಿದ್ದವರು ತಡೆಯಲು ಬಂದಿದ್ದಕ್ಕೆ ನನಗೆ ಪಾಠಮಾಡಬೇಡಿ ಎಂದು ಆವಾಜ್ ಹಾಕಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ವೈರಲ್ ಆಗಿದ್ದು, ಮಹಿಳೆಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.