ವಿಜಯಪುರ: ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಕ್ಕೆ ನನ್ನ ವಿರೋಧವಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಭಾರತದ ವಿರುದ್ಧ ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆ ಮಾಡುತ್ತಿದೆ. ಅವರು ಭಯೋತ್ಪಾದನೆ ನಿಲ್ಲಿಸುವವರೆಗೂ ಯಾವುದೇ ಕ್ರಿಕೆಟ್ ಆಡಬಾರದು. ಕ್ರಿಕೆಟ್ ಮಾತ್ರವಲ್ಲ ಅವರೊಂದಿಗೆ ಯಾವ ಪಂದ್ಯವನ್ನೂ ಆಯೋಜಿಸಲಾಬರದು. ಗುಂಡಿಗೆ ಗುಂಡು ಕೊಡುವ ಕೆಲಸವಾಗಬೇಕು ಎಂದು ಹೇಳಿದ್ದಾರೆ.