ಕೋಲಾರ: ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಮ್ಮಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅತ್ತೆಯ ಮೇಲೆ ಹಲ್ಲೆ ನಡೆಸಿದ್ದ ಸೊಸೆ ರೇಖಾ ಹಾಗೂ ಆಕೆಯ ಪ್ರಿಯಕರ ಶಶಿಕುಮಾರ್ ನನ್ನು ಬಂಧಿಸಲಾಗಿದೆ.
ಆಗಸ್ಟ್ 31ರಂದು ಅತ್ತೆ ರಮಣಮ್ಮ ಮೇಲೆ ಇಬ್ಬರೂ ಹಲ್ಲೆ ನಡೆಸಿದ್ದರು. 7 ವರ್ಷಗಳ ಹಿಂದೆ ಆಂಧ್ರ ಮೂಲದ ರೇಖಾ, ಗುಮ್ಮಲಪಲ್ಲಿಯ ಮಂಜುನಾಥ್ ರೆಡ್ಡಿ ನನ್ನು ಪ್ರೀತಿಸಿ ವಿವಾಹವಾಗಿದ್ದಳು. ಇತ್ತೀಚೆಗೆ ಶಶಿಕುಮಾರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಆರೋಪ ಕೇಳಿಬಂದಿದೆ. ಅತ್ತೆಗೆ ರೇಖಾಳ ಅಕ್ರಮ ಸಂಬಂಧದ ವಿಷಯ ಗೊತ್ತಾಗಿದೆ. ಹೀಗಾಗಿ ಪ್ರಿಯಕರ ಶಶಿಕುಮಾರ್ ಜೊತೆ ಸೇರಿ, ಅತ್ತೆ ರಮಣಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಳು. ಈ ಹಿನ್ನೆಲೆಯಲ್ಲಿ ರೇಖಾ ಹಾಗೂ ಶಶಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.