ಬೆಂಗಳೂರು: ಬೆಂಗಳೂರಿನಲ್ಲಿ ಇನ್ನು ಎಲ್ಲಿಂದರಲ್ಲಿ ಕಸ ಎಸೆದರೆ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
ಬೆಂಗಳೂರು ನಗರದ ರಸ್ತೆಗಳು, ಕಾಲವೆಗಳು, ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಎಸೆದರೆ ಇನ್ನು ಮುಂದೆ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಇದುವರೆಗೆ ಮೊದಲ ಬಾರಿ ಸಿಕ್ಕಿ ಬಿದ್ದರೆ 500 ರೂಪಾಯಿ, ನಂತರ ಒಂದು ಸಾವಿರ ರೂಪಾಯಿ, ಬಳಿಕ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿತ್ತು.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕರೇಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ನಗರದ ರಸ್ತೆಗಳು, ಕಾಲುವೆಗಳು, ಬ್ಲಾಕ್ ಸ್ಪಾಟ್ ಗಳಿಗೆ ಕಸ ಎಸೆದರೆ ಇನ್ನು ಮುಂದೆ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ನಗರದಲ್ಲಿ ಎಲ್ಲರೂ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಪಾಲಿಕೆಯ ಆಟೋಗಳಿಗೆ ನೀಡುವಂತೆ ಮನವಿ ಮಾಡಿದ್ದಾರೆ.
You Might Also Like
TAGGED:ಕಸ