ಚಾಮರಾಜನಗರ: ಹುಲಿ ಪತ್ತೆ ಹಚ್ಚಲು ವಿಳಂಬವಾಗಿ ಆಗಮಿಸಿದ್ದಾರೆ ಎಂದು ಅರಣ್ಯ ಸಿಬ್ಬಂದಿಯನ್ನು ಹುಲಿ ಬೋನಿನಲ್ಲಿ ಕೂಡಿಹಾಕಿದ್ದ ಐವರು ರೈತರ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರೈತರಾದ ರಘು, ಪ್ರಸಾದ್, ದೀಪು, ಗಂಗಾಧರ ಸ್ವಾಮಿ ಮತ್ತು ರೇವಣ್ಣ ಅವರ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಹುಲಿ ಪತ್ತೆಗೆ ಆಗಮಿಸಿದ್ದ ವಿಶೇಷ ಹುಲಿ ಸಂರಕ್ಷಣಾ ದಳದ 13 ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೆಪ್ಟೆಂಬರ್ 9ರಂದು ಬೆಳಗ್ಗೆ ಗಂಗಾಧರ ಸ್ವಾಮಿ ಜಮೀನಿಗೆ ಬಂದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬೀಪುಗಳ ಚಕ್ರದ ಗಾಳಿ ಬಿಟ್ಟು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ತಳ್ಳಿಕೊಂಡು ಬೋನಿನೊಳಗೆ ಕೂಡಿಹಾಕಿ ಲಾಕ್ ಮಾಡಿದ್ದಾರೆ. ಬೋನಿನ ಸುತ್ತಲೂ ಸೌದೆ ತಂದು ಬೆಂಕಿ ಹಾಕಿ ಜೀವಂತ ಸುಡುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.